ಕೊಹ್ಲಿಯನ್ನು ಕೆಣಕಲು ಆಸೀಸ್ ಆಟಗಾರರು ಹೆದರುವುದೇಕೆ?; ಸಿಕ್ರೇಟ್ ರಿವೀಲ್ ಮಾಡಿದ ಕ್ಲಾರ್ಕ್
Virat Kohli: ಐಪಿಎಲ್ನಲ್ಲಿ ಭಾರತೀಯ ಆಟಗಾರರ ಜೊತೆಗೆ ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಜೊತೆಗೆ ಆಡಬೇಕಾದ ಅನಿವಾರ್ಯತೆ ಇರುವ ಕಾರಣ ಆಸೀಸ್ ಆಟಗಾರರು ಸ್ಲೆಡ್ಜಿಂಗ್ ಹಂತ ಹಂತವಾಗಿ ಕಡಿಮೆ ಮಾಡಿದ್ದಾರೆ ಎನ್ನುವುದು ಕ್ಲಾರ್ಕ್ ಮಾತು. ವರದಿ- ಕೌಶಿಕ್ ಕೆ. ಎಕ್
ಆಸ್ಟ್ರೇಲಿಯಾ ಆಟಗಾರರೆಂದರೆ ಸ್ಲೆಡ್ಜಿಂಗ್ನಲ್ಲಿ ಮುಂದು ಎನ್ನುವ ಕಾಲವಿತ್ತು. ಸ್ಲೆಡ್ಜ್ ಮೂಲಕವೇ ಎದುರಾಳಿ ತಂಡವನ್ನು ಮಾನಸಿಕವಾಗಿ ಕುಗ್ಗಿಸುವ ತಂತ್ರ ಆಸೀಸ್ ಆಟಗಾರರು ಬಲವಾಗಿ ನೆಚ್ಚಿಕೊಂಡಿದ್ದರು.
ಆದರೆ, ಇಂತಹ ಅಸ್ತ್ರಕ್ಕೆ ತಿರುಗುಬಾಣವಾಗಿದ್ದು ಭಾರತದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಎನ್ನುವ ಅಚ್ಚರಿ ವಿಚಾರ ಬಿಚ್ಚಿಟ್ಟಿದ್ದಾರೆ ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್.
ವರ್ಷದಿಂದ ವರ್ಷಕ್ಕೆ ಐಪಿಎಲ್ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಮತ್ತೊಂದೆಡೆ ಕಾಂಗರೂ ನಾಡಿನ ಆಟಗಾರರು ಐಪಿಎಲ್ ಮೂಲಕ ಮಿಂಚು ಹರಿಸುತ್ತಿದ್ದಾರೆ.