EBM News Kannada
Leading News Portal in Kannada

ಕೊರೋನಾ ನಾಶಕ್ಕೆ ದೇಹದೊಳಗೆ ಅಲ್ಟ್ರಾವಯಲೆಟ್​ ಕಿರಣ ಹಾಯಿಸಿ; ಟ್ರಂಪ್​ ಸಲಹೆಗೆ ವೈದ್ಯರೇ ಶಾಕ್​

0

ವಾಷಿಂಗ್ಟನ್ (ಏ.24)​: ಅಮೆರಿಕದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಈಗಾಗಲೇ ಅಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಸಾಕಷ್ಟು ಸಂಶೋಧಕರು ಇದಕ್ಕೆ ಔಷಧಿ ಕಂಡು ಹಿಡಿಯುವುದರಲ್ಲಿ ತೊಡಗಿದ್ದಾರೆ ಈ ಮಧ್ಯೆ ಕೊರೋನಾ ನಾಶಕ್ಕೆ ಡೊನಾಲ್ಡ್​ ಟ್ರಂಪ್​ ನೀಡಿದ ಸಲಹೆ ಕೇಳಿ ವೈದ್ಯರೇ ಕಂಗಾಲಾಗಿದ್ದಾರೆ.

ಈ ಬಗ್ಗೆ ಶ್ವೇತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್​ ಟ್ರಂಪ್​, ವೈದ್ಯರಿಗೆ ವಿಚಿತ್ರ ಸಲಹೆಗಳನ್ನು ನೀಡಿದ್ದಾರೆ. “ಕೊರೋನಾ ವೈರಸ್​ ಬಂದ ವ್ಯಕ್ತಿಯ ದೇಹದ ಒಳಗೆ ಸೋಂಕು ನಿವಾರಕವನ್ನು ಸೇರಿಸಿ. ಇದರ ಜೊತೆಗೆ ಅಲ್ಟ್ರಾವಯಲೆಟ್​ ಕಿರಣ​ ಹಾಯಿಸುವ ಮೂಲಕ ವೈರಸ್​ ಸಾಯಿಸಿ,” ಎಂದು ಟ್ರಂಪ್​ ಸೂಚನೆ ನೀಡಿದ್ದಾರೆ.

ಟ್ರಂಪ್​ ಮಾತನಾಡುವುದಕ್ಕೂ ಮೊದಲು ಮಾತನಾಡಿದ್ದ ಹೋಮ್​ಲ್ಯಾಂಡ್​ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಲಹೆಗಾರ ವಿಲಿಯಮ್ಸ್​, “ಅಲ್ಟ್ರಾವಯಲೆಟ್​ ಕಿರಣಗಳು ಕೊರೋನಾ ವೈರಸ್​ ನಾಶ ಮಾಡುವ ಶಕ್ತಿ ಹೊಂದಿವೆ, ಬ್ಲೀಚ್​ ಐದು ನಿಮಿಷಗಳಲ್ಲಿ ವೈರಸ್​ ನಾಶ ಮಾಡುತ್ತದೆ. ಶುದ್ಧ ಆಲ್ಕೋಹಾಲ್​ ಒಂದು ನಿಮಿಷದಲ್ಲಿ ರೋಗಕಾರಕಗಳನ್ನು ನಾಶ ಮಾಡುತ್ತವೆ,” ಎಂದು ಹೇಳಿದ್ದರು. ಇದಾದ ನಂತರದಲ್ಲಿ ಟ್ರಂಪ್​ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಟ್ರಂಪ್​ ಹೇಳಿಕೆ ಕುರಿತು ಕೆಲ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಯುವಿ ಕಿರಣಗಳನ್ನು ದೇಹದ ಒಳಗೆ ಹಾಯಿಸುವುದು ತುಂಬಾನೇ ಅಪಾಯಕಾರಿ. ಈ ರೀತಿ ಆಲೋಚನೆ ಮಾಡುವ ಬದಲು ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Leave A Reply

Your email address will not be published.