ಮಾಸ್ಕೋ : ಪೂರ್ವ ಉಕ್ರೇನ್‍ನ ಮತ್ತೊಂದು ಗ್ರಾಮವನ್ನು ತನ್ನ ಪಡೆಗಳು ವಶಪಡಿಸಿಕೊಂಡಿದ್ದು ಮತ್ತಷ್ಟು ಪ್ರದೇಶಗಳಲ್ಲಿ ಮುನ್ನಡೆ ಸಾಧಿಸಿವೆ ಎಂದು ರಶ್ಯ ಹೇಳಿದೆ.
ಅವ್ದಿವ್ಕ ಪ್ರಾಂತದ ಬಳಿಯಿರುವ ಬೆರ್ಡಿಚ್ ಗ್ರಾಮವನ್ನು ಸಂಪೂರ್ಣ ವಿಮೋಚನೆಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ. ಅವ್ದಿವ್ಕ ಪ್ರಾಂತವನ್ನು ರಶ್ಯ ಪಡೆಗಳು ಫೆಬ್ರವರಿಯಲ್ಲಿ ವಶಪಡಿಸಿಕೊಂಡಿದ್ದವು. ಅಮಾಯಕರ ಜೀವಹಾನಿಯನ್ನು ತಪ್ಪಿಸಲು ತನ್ನ ಪಡೆಗಳು ಬೆರ್ಡಿಚ್ ಗ್ರಾಮದಿಂದ ಹಿಂದೆ ಸರಿಯುತ್ತಿವೆ ಎಂದು ಕಳೆದ ವಾರ ಉಕ್ರೇನ್ ಸೇನೆ ಹೇಳಿಕೆ ನೀಡಿತ್ತು.