EBM News Kannada
Leading News Portal in Kannada

ಆಲ್ಟ್ರಾ ಹೆಚ್ ಡಿ ಡಿಸ್ಪ್ಲೇ ಹೊಂದಿರುವ ಬೆಸ್ಟ್ ಲ್ಯಾಪ್ ಟಾಪ್ ಗಳು

0

ಭಾರತೀಯ ಲ್ಯಾಪ್ ಟಾಪ್ ಮಾರುಕಟ್ಟೆ ಸಾಕಷ್ಟು ವಿಭಿನ್ನ ಲ್ಯಾಪ್ ಟಾಪ್ ಗಳಿಂದ ತುಂಬಿಹೋಗಿದ್ದು ವಿವಿಧ ತಯಾರಿಕಾ ಸಂಸ್ಥೆಗಳು ಸ್ಪರ್ಧೆಯಲ್ಲಿವೆ. ಇದರಲ್ಲಿ ಕೆಲವು ಕಂಪ್ಯೂಟರ್ ಗಳು ಬಹಳ ಶಕ್ತಿಶಾಲಿಯಾಗಿದ್ದು ಫುಲ್-ಸೈಜ್ ಪಿಸಿ ಮತ್ತು ವಿವಿಧ ಫೀಚರ್ ಗಳಾಗಿರುವ ಆಕ್ಟಾ ಕೋರ್ ಸಿಪಿಯು, 8ಜಿಬಿ ಜಿಪಿಯು, 32ಜಿಬಿವರೆಗಿನ ಮೆಮೊರಿ ವ್ಯವಸ್ಥೆ ಮತ್ತು 2ಟಿಬಿ ವರೆಗಿನ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ಲೈನ್ ಅಪ್ ಲ್ಯಾಪ್ ಟಾಪ್ ಗಳಿದ್ದು ಸೂಪರ್ ಹೈ ರೆಸಲ್ಯೂಷನ್ನಿನ 4ಕೆ ಡಿಸ್ಪ್ಲೇ ವ್ಯವಸ್ಥೆ ಇದ್ದು ಇದು ವಿಡಿಯೋ ಎಡಿಟರ್ ಮತ್ತು ಗ್ರಾಫಿಕ್ಸ್ ಡಿಸೈನರ್ ಗಳಿಗೆ ಬಹಳ ಅನುಕೂಲಕರವಾಗಿದೆ. 4ಕೆ ಅಥವಾ ಅಲ್ಟ್ರಾ ಹೆಚ್ ಡಿ ಸ್ಕ್ರೀನ್ ವ್ಯವಸ್ಥೆ ಇರುವ ಕೆಲವು ಬೆಸ್ಟ್ ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಲೆನೋವಾ ಯೋಗ ಎಸ್740 (81RS0065IN) ಲ್ಯಾಪ್ ಟಾಪ್ ಸೂಪರ್ ಕಾಂಪ್ಯಾಕ್ಟ್ 14 ಇಂಚಿನ ಸ್ಕ್ರೀನ್ ಜೊತೆಗೆ ಟಚ್ ಗೆ ಬಂಬಲ ಮತ್ತು 4K ರೆಸಲ್ಯೂಷನ್ (3840 x 2160p)ನ್ನು ಹೊಂದಿರುತ್ತದೆ.ಇದು 10ನೇ ಜನರೇಷನ್ನಿನ ಇಂಟೆಲ್ ಕೋರ್-ಐ7 ಪ್ರೊಸೆಸರ್ ಜೊತೆಗೆ 16GB RAM ಮತ್ತು 1TB SSD ಆಧಾರಿತ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ಹೆಚ್ ಪಿ ಸ್ಪೆಕ್ಟ್ರೇ x360 15-df1004tx (8AG42PA) ಹೈ-ಎಂಡ್ 15 ಇಂಚಿನ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದ್ದು 3840 x 2160p ರೆಸಲ್ಯೂಷನ್ ಅಥವಾ 4K ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ಇದು 9ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB SSD ಆಧಾರಿತ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ.

ಲೆನೊವಾ ತಿಂಕ್ ಪ್ಯಾಡ್ ಪಿ1 (20QT0016US) ರೋಬೋಸ್ಟ್ ಬಿಲ್ಟ್ ಕ್ವಾಲಿಟಿ ಮತ್ತು 15.6-ಇಂಚಿನ IPS ಸ್ಕ್ರೀನ್ ಹೊಂದಿದೆ ಮತ್ತು 4K ರೆಸಲ್ಯೂಷನ್ ಹೊಂದಿದೆ. ಈ ಲ್ಯಾಪ್ ಟಾಪ್ 6-ಕೋರ್ ಇಂಟೆಲ್ ಕೋರ್ ಐ7 9ನೇ ಜನರೇಷನ್ನಿನ ಸಿಪಿಯು ಜೊತೆಗೆ 16GB RAM ಮತ್ತು Nvidia Quadro T2000 GPU ಹೊಂದಿದೆ.

ಡೆಲ್ ಏಲಿಯನ್ ವೇರ್ ಎಂ15 (L-C569911WIN9) ಮತ್ತೊಂದು 4ಕೆ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದ್ದು OLED ಸ್ಕ್ರೀನ್ ನ್ನು ಹೊಂದಿದೆ. ಗೇಮಿಂಗ್ ಮಷೀನ್ ರನ್ನಿಂಗ್ ಹೊಂದಿದ್ದು 9ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 8GB Nvidia RTX 2070 GPU ಹೊಂದಿದೆ. ಈ ಲ್ಯಾಪ್ ಟಾಪ್ 16GB RAM ಣತ್ತು 1TB HDD ಆಧಾರಿತ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

Leave A Reply

Your email address will not be published.