EBM News Kannada
Leading News Portal in Kannada

ಈ ತಿಂಗಳು ಲಾಂಚ್ ಆಗಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!

0

ವಿಶ್ವವ್ಯಾಪಿ ಕೊರೊನಾ ವೈರಸ್‌ ಹಾವಳಿ ಹೆಚ್ಚಾಗಿದ್ದು, ಕೋವಿಡ್‌-19 ಸೋಂಕು ಹರಡದಂತೆ ತಡೆಯಲು ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ವ್ಯವಸ್ಥೆಯ ಮೋರೆ ಹೋಗಿವೆ. ಈ ನಿಟ್ಟಿನಲ್ಲಿ ಕಳೆದ ತಿಂಗಳು ಹಲವು ಟೆಕ್ ಕಾರ್ಯಕ್ರಮಗಳು ರದ್ದಾಗಿವೆ. ಈ ವೇಳೆಯಲ್ಲಿ ಕೆಲವು ಕಂಪನಿಗಳು ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದ್ದರೇ, ಇನ್ನೂ ಕೆಲವು ಸಂಸ್ಥೆಗಳು ಫೋನ್ ಲಾಂಚ್ ಅನ್ನು ಮುಂದೂಡಿಕೆ ಮಾಡಿವೆ. ಆದರೆ ಈ ತಿಂಗಳು ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿವೆ.

ಹೌದು, ಕೊರೊನಾ ವೈರಸ್‌ ಪರಿಣಾಮದಿಂದಾಗಿ ಮಾರ್ಚ್ ತಿಂಗಳು ಮೊಬೈಲ್ ಮಾರುಕಟ್ಟೆ ಥಂಡಾ ಹೊಡೆದಿದೆ. ಆದ್ರೆ ಈ ತಿಂಗಳಿನಲ್ಲಿ ಕೆಲವು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುವ ನಿರೀಕ್ಷೆಗಳಿವೆ. ಆ ಪೈಕಿ ಒನ್‌ಪ್ಲಸ್‌, ಒಪ್ಪೊ ರೆನೊ, ಹಾನರ್‌, ರಿಯಲ್‌ ಮಿ ಮತ್ತು ಆಪಲ್‌ ಸಂಸ್ಥೆಗಳ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಆಗುವ ಸಾಧ್ಯತೆಗಳು ಅಧಿಕ ಎನ್ನಲಾಗಿದೆ. ಹಾಗಾದರೇ ಈ ತಿಂಗಳು ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಜನಪ್ರಿಯ ಒನ್‌ಪ್ಲಸ್‌ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ ಸರಣಿಯು ಇದೇ ಏ.14 ರಂದು ಬಿಡುಗಡೆ ಆಗುವದು ಬಹುತೇಕ ಖಚಿತ ಎನ್ನಲಾಗಿದೆ. ಈ ಒನ್‌ಪ್ಲಸ್‌ 8 ಸರಣಿಯು ಒಟ್ಟು ಮೂರು ಮಾಡೆಲ್‌ಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಒನ್‌ಪ್ಲಸ್‌ 8, ಒನ್‌ಪ್ಲಸ್‌ 8 ಪ್ರೊ ಜೊತೆಗೆ ಇನ್ನೊಂದು ಸ್ಮಾರ್ಟ್‌ಫೋನ್ ಸಹ ಲಾಂಚ್ ಆಗಲಿದೆ ಎಂದು ಹೇಳಲಾಗಿದೆ.

ಚೀನಾ ಮೂಲದ ಜನಪ್ರಿಯ ಒಪ್ಪೊ ಸಂಸ್ಥೆಯು ಇದೀಗ ಮತ್ತೆ ಹೊಸ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಬಹುನಿರೀಕ್ಷಿತ ಒಪ್ಪೊ ರೆನೋ ಏಸ್‌ 2 ಈ ತಿಂಗಳ ಅಂತ್ಯದೊಳಗೆ ಲಾಂಚ್ ಆಗುವ ಸಾಧ್ಯತೆ ಇದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ಹೊಂದಿದ್ದು, 8GB ಮತ್ತು 12GB RAM ಆಯ್ಕೆಗಳನ್ನು ಹೊಂದಿರಲಿದೆ. ಹಾಗೆಯೇ ಈ ಫೋನ್ ಬ್ಲ್ಯಾಕ್, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆಯನ್ನು ಪಡೆದಿರಲಿದೆ.

Leave A Reply

Your email address will not be published.