EBM News Kannada
Leading News Portal in Kannada

ಹಾಡು ಕೇಳಲು ಲಭ್ಯವಿರುವ ಐದು ಅತ್ಯುತ್ತಮ ಮ್ಯೂಸಿಕ್‌ ಆಪ್‌ಗಳು!

0

ಮ್ಯೂಸಿಕ್‌ ಈ ಒಂದು ಪದಕ್ಕೆ ಎಂತಹ ಶಕ್ತಿ ಇದೆ ಎಂದರೆ ಎಂತಹ ಬೇಸರವನ್ನಾದರೂ ಕ್ಷಣಮಾತ್ರದಲ್ಲಿ ಮರೆಸಬಲ್ಲದು. ನೆನಪುಗಳ ಜೊತೆಗೆ ಹಾಡಿನ ಮೂಲಕ ಪಯಣವನ್ನೇ ಹೊರಡಬಹುದು. ಮ್ಯೂಸಿಕ್‌ ಅಂದ್ರೆನೆ ಹಾಗೇ ಅದು ಒಂದು ಶಕ್ತಿ ಪ್ರೇರಣೆ ಎಲ್ಲವೂ ಕೂಡ. ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಮೇಲಿನ ಪ್ರೀತಿಯನ್ನ ಕಂಡು ಕೆಲವು ಆಪ್‌ಗಲು ಬಂದಿವೆ. ಮ್ಯೂಸಿಕ್‌ ಪ್ರಿಯರನ್ನೇ ಗುರಿಯಾಗಿರಿಸಿಕೊಂಡಿರುವ ಈ ಆಪ್‌ಗಳು ಬಳಕೆದಾರರು ಬಯಸುವ ಹಾಡುಗಳನ್ನ ಒದಗಿಸುವ ಮೂಲಕ ನೆಚ್ಚಿನ ಆಪ್‌ಗಳಾಗಿ ಗುರುತಿಸಿಕೊಂಡಿವೆ

ಹೌದು, ನಾವು ನೀವು ಮಾತ್ರವಲ್ಲ ಬಹುತೇಕ ಇಂದಿನ ಯುವ ಜನಾಂಗ ಪ್ರಯಾಣವಿರಲಿ, ಏಕಾಂತತೆ ಇರಲಿ, ಎಲ್ಲ ಕಡೆಗೂ ಕಿವಿಗೊಂದು ಇಯರ್‌ಫೋನ್‌ ಹಾಕಿಕೊಂಡು ಹಾಡನ್ನ ಗುನುಗುತ್ತಾ ಹೊರಟು ಬಿಡುತ್ತಾರೆ. ಯುವ ಜನಾಂಗ ಆಲಿಸುವ, ಆನಂದಿಸುವ, ಪ್ರಸ್ತುತತೆ ಹಾಗೂ ಆಲ್‌ಟೈಂ ಫೇವರೀಟ್‌ ಹಾಡುಗಳನ್ನ ಕ್ಷಣಮಾತ್ರದಲ್ಲಿ ನಿಡುವ ಮ್ಯೂಸಿಕ್‌ ಆಪ್‌ಗಳು ಯುವಕರನ್ನ ಸೆಳೆದಿವೆ. ಸದ್ಯ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಹಲವಾರು ಮ್ಯೂಸಿಕ್‌ ಆಪ್‌ಗಳು ಕಾಣ ಸಿಗುತ್ತವೆ. ಆದರೆ ಅವುಗಳಲ್ಲಿ ಅತ್ಯುತ್ತಮವಾದ ಐದು ಆಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ನಾವು ತಿಳಿಸಿಕೊಡ್ತಿವಿ ಬನ್ನಿ.

ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ನಿಡುವ ಆಪ್‌ಗಳ ಬಗ್ಗೆ ಉಲ್ಲೇಖಿಸುವಾಗ ಸ್ಪಾಟಿಫೂ ಆಪ್‌ನ ಬಗ್ಗೆ ಹೇಳಲೇಬೇಕು. 2019 ರಲ್ಲಿ ಭಾರತಕ್ಕೆ ಕಾಲಿಟ್ಟು ಸ್ಪಾಟಿಫೈ ಪ್ರಸ್ತು ಅತ್ಯುತ್ತಮ ಮ್ಯೂಸಿಕ್‌ ಆಪ್‌ಗಳಲ್ಲಿ ಮೊದಲನೇ ಸ್ಥಾನವನ್ನ ಆಲಂಕರಿಸಿದೆ. ಬಳಕೆದಾರರ ಸ್ನೇಹಿ ಆಗಿರುವ ಈ ಆಪ್‌ ಬಳಕೆದಾರರ ಆಸಕ್ತಿಯ ಆಧಾರದ ಮೇಲೆ ಹಾಡುಗಳನ್ನ ಸಂಗ್ರಹಿಸುತ್ತದೆ. ಇನ್ನು ಇದರ ಫ್ರೀಮಿಯಮ್, 3 ತಿಂಗಳ ಪ್ರಾಯೋಗಿಕ ಅವಧಿ ಮತ್ತು ಪಾವತಿಸಿದ ಚಂದಾದಾರಿಕೆ ಯೋಜನೆಗಳು ಅತ್ಯುತ್ತಮವಾಗಿದೆ. ಇದರಲ್ಲಿ ತಿಂಗಳಿಗೆ 119.ರೂನ ಪ್ರೀಮಿಯಂ ಸೇವೆ ಕೂಡ ಸೇರಿದೆ. ಜಾಹೀರಾತು-ಮುಕ್ತ ಸಂಗೀತ ಅನುಭವ, ಆಫ್‌ಲೈನ್ ಪ್ಲೇಬ್ಯಾಕ್, ಜೊತೆಗೆ ಪಾಟ್‌ಕಾಸ್ಟ್‌ಗಳನ್ನು ಸೇರಿಸಲು ಸ್ಪಾಟಿಫೈನಲ್ಲಿ ಅವಕಾಶವಿದೆ.

ಪ್ರಾರಂಭದಲ್ಲಿ ಸಾವ್ನ್‌ ಎಂದು ಪ್ರಾರಂಭವಾದ ಈ ಮ್ಯೂಸಿಕ್‌ ಸ್ಟ್ರಿಮಿಂಗ್‌ ಆಪ್‌ ಇದೀಗ ಜಿಯೋ ಸಂಗೀತದೊಂದಿಗೆ ವಿಲೀನಗೊಳಿಸಲಾಗಿದ್ದು, ಜಿಯೋಸಾವ್ನ್ ಎಂದು ಹೆಸರಿಸಲಾಗಿದೆ. ಜಿಯೋಸಾವ್ನ್ ಮ್ಯೂಸಿಕ್‌ ಸ್ಟ್ರಿಮಿಂಗ್‌ ಆಪ್‌ ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ 45 ದಶಲಕ್ಷಕ್ಕೂ ಹೆಚ್ಚು ಹಾಡು ಸಂಗ್ರಹಗಳನ್ನು ಹೊಂದಿದೆ. ರಿಲಯನ್ಸ್ ಜಿಯೋ ಬಳಕೆದಾರರು ತಮ್ಮ ಜಿಯೋ ಕಾಲರ್ ಟ್ಯೂನ್‌ಗಳನ್ನು 70, 90 ರ ದಶಕದ ವಿಶಾಲ ಮ್ಯೂಸಿಕ್‌ ಲೈಬ್ರರಿಯಿಂದ ಮತ್ತು ಪ್ರಸ್ತುತ ರಾಪ್ಸ್ / ರೀಮಿಕ್ಸ್‌ಗಳಿಂದ ಹೊಂದಿಸಲು ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಇದು ಕೂಡ ಫ್ರೀಮಿಯಮ್ ಮತ್ತು ಪ್ರೀಮಿಯಂ ಯೋಜನೆಗಳನ್ನ ಹೊಂದಿದ್ದು, ತಿಂಗಳಿಗೆ ₹ 99 ರಿಂದ ಪ್ರಾರಂಭವಾಗುತ್ತವೆ.

Leave A Reply

Your email address will not be published.