ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕಾಲ ಕಳೆಯುವಂತಾ ಪರಿಸ್ಥಿತಿಯಿದೆ. ಟೀಮ್ ಇಂಡಿಯಾ ಕ್ರಿಕೆಟಿಗರೂ ಕೂಡ ತಮ್ಮ ಮನೆಯಲ್ಲೇ ಇದ್ದು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಕೂಡ ತಮ್ಮ ಪತ್ನಿ ಪುತ್ರಿಯ ಜೊತೆಗೆ ಈ ಸಮಯವನ್ನು ಆನಂದಿಸುತ್ತಿದ್ದಾರೆ
ಈ ಮಧ್ಯೆ ಧೋನಿ ಪುತ್ರಿ ಜೀವಾ ಹೊಸ ಕೆಲಸಕ್ಕೆ ಕೈ ಹಾಕಿದ್ದಾಳಂತೆ. ಈ ಕೆಲಸದಿಂದ ಧೋನಿಯ ಜೊತೆಗೆ ಕೆಲಸಮಾಡುತ್ತಿದ್ದವರೊಬ್ಬರು ಕೆಲವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರಂತೆ. ಈ ಬಗ್ಗೆ ಆ ವ್ಯಕ್ತಿಯೇ ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಧೋನಿ ಪುತ್ರಿ ಮನೆಯಲ್ಲಿ ಏನ್ ಮಾಡ್ತಿದ್ದಾಳೆ. ಕೆಲಸ ಕಳೆದುಕೊಳ್ಲುವ ಭಯ ಯಾರಿಗಿದೆ, ಮುಂದೆ ಓದಿ..
ಧೋನಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಧೋನಿಯ ಸೌಂದರ್ಯ ಕಾಪಾಡಿಕೊಳ್ಳಲು ಧೋನಿಗೆ ಹೊಸ ಬ್ಯೂಟಿಷಿಯನ್ ಸಿಕ್ಕಿದ್ದಾರೆ. ಧೋನಿ ಮುಖದ ಸೌಂದರ್ಯಕ್ಕಾಗಿ ಹೊಸ ಬ್ಯೂಟಿಷಿಯನ್ ಟ್ರೈನಿಂಗ್ ಆರಂಭಿಸಿದ್ದಾರೆ.
ಧೋನಿಯ ಹೊಸ ಬ್ಯೂಟೀಷಿಯನ್ ಬೇರೆ ಯಾರೂ ಅಲ್ಲ. ಧೋನಿ ಪುತ್ರಿ ಝೀವಾ. ಧೋನಿಗೆ ಮೇಕಪ್ ಮಾಡುತ್ತಿರುವ ವಿಡಿಯೋವನ್ನು ಸ್ವಪ್ನ ಭಾವ್ನಾನಿ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಆತಂಕವನ್ನು ಈ ಸಂದರ್ಭದಲ್ಲಿ ಭಾವ್ನಾನಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.