EBM News Kannada
Leading News Portal in Kannada

ಭಾರತೀಯ ಆಟಗಾರರು ಆಡುವುದು ದಾಖಲೆಗಾಗಿ, ತಂಡಕ್ಕಾಗಿ ಅಲ್ಲ: ಇಂಝಮಾಮ್ ಉಲ್ ಹಕ್

0

ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಕ್ಕಾಗಿ ಖಾಲಿ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಆಡಿಸಬೇಕು ಎಂದಿದ್ದ ಶೋಯಬ್ ಅಖ್ತರ್​ ಹೇಳಿಕೆಗೆ ಇತ್ತೀಚೆಗಷ್ಟೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಪಿಲ್ ದೇವ್ ಖಾರವಾಗಿ ತಿರುಗೇಟು ನೀಡಿದ್ದರು.

ಸದ್ಯ ಭಾರತ- ಪಾಕಿಸ್ತಾನ ನಡುವೆ ಯಾವುದೇ ಕಾರಣಕ್ಕೂ ಪಂದ್ಯ ನಡೆಯಲು ಸಾಧ್ಯವಿಲ್ಲ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ‘ಲಾಹೋರ್​ನಲ್ಲಿ ಹಿಮಪಾತ ಆಗಬಹುದು. ಆದರೆ, ಇಂಡೋ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

ಇತ್ತೀಚೆಗಷ್ಟೆ ಅಖ್ತರ್ ಅವರು, ‘ಭಾರತ-ಪಾಕ್​ನಲ್ಲಿ ಕೋವಿಡ್ 19 ವೈರಸ್ ತಾಂಡವವಾಡುತ್ತಿದೆ. ಸಾವಿರಾರು ಜನರಿಗೆ ತೊಂದರೆಯಾಗಿದೆ. ಹೀಗಾಗಿ ಭಾರತ-ಪಾಕ್ ನಡುವೆ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿ ನಡೆಸಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಈ ಪಂದ್ಯಕ್ಕೆ ಸಾಕಷ್ಟು ವೀಕ್ಷಕರು ಸಿಗುತ್ತಾರೆ. ಇದರಿಂದ ಸಂಗ್ರಹವಾಗುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಅದನ್ನು ಎರಡೂ ದೇಶಗಳು ಸಮವಾಗಿ ಬಳಸಿಕೊಳ್ಳಬಹುದು’ ಎಂಬ ಸಲಹೆಯನ್ನು ಅಖ್ತರ್ ನೀಡಿದ್ದರು.

ಆದರೆ, ಅಖ್ತರ್ ಈ ಹೇಳಿಕೆ ನೀಡಿದ ಬೆನ್ನಲ್ಲೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗರಂ ಆಗಿದ್ದರು. ‘ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಅನ್ನು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಭಾರತಕ್ಕೆ ಈಗ ಹಣದ ಅವಶ್ಯಕತೆಯಿಲ್ಲ ಮತ್ತು ಕ್ರಿಕೆಟ್​ಗೋಸ್ಕರ ಪ್ರಾಣವನ್ನು ಪಣಕ್ಕಿಡುವ ಅವಶ್ಯಕತೆಯಿಲ್ಲ. ನಮ್ಮಲ್ಲಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿವೆ. ಬಿಸಿಸಿಐ ಈಗಾಗಲೇ (51 ಲಕ್ಷ ರೂ.) ಧನ ಸಹಾಯ ಮಾಡಿದೆ. ಅಗತ್ಯವಿದ್ದರೆ ಇನ್ನಷ್ಟು ನೆರವಾಗುವ ಸಾಮರ್ಥ್ಯ ಬಿಸಿಸಿಐಗಿದೆ’ ಎಂದು ಕಪಿಲ್ ನುಡಿದಿದ್ದರು.

Leave A Reply

Your email address will not be published.