Puneeth Rajkumar New Fitness Video: ವೈರಲ್ ಆಗುತ್ತಿದೆ ಪುನೀತ್ ರಾಜ್ಕುಮಾರ್ ಫಿಟ್ನೆಸ್ ವಿಡಿಯೋ..!
ಪುನೀತ್ ರಾಜ್ಕುಮಾರ್ 40ರ ಗಡಿ ದಾಟಿದರೂ ಯುವಕರು ನಾಚುವಂತಹ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಪುನೀತ್ ಆಗಾಗ ನಂದಿಬೆಟ್ಟಕ್ಕೆ ಸೈಕಲ್ನಲ್ಲೇ ಹೋಗುತ್ತಾರೆ. ಇನ್ನು ಅವರ ಡಾನ್ಸಿಂಗ್ ಹಾಗೂ ವ್ಯಾಯಾಮ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ.
ಸದ್ಯ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಅಭಿಮಾನಿಗಳಿಗಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಪುನೀತ್ ಅವರು ತಮ್ಮ ಫಿಟ್ನೆಸ್ಗಾಗಿ ಮಾಡುವ ಕಸರತ್ತಿನ ತುಣುಕಿದೆ.
“ಪವರ್ ಸ್ಟಾರ್“ಎಂಬ ಬಿರುದು “ಶಿವಣ್ಣ” ಕೊಟ್ಟಿದ್ದಕ್ಕೂ.. ಅಭಿಮಾನಿಗಳು ಎದೆಯಲ್ಲಿಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ… ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕ👍
ಈ ವಿಡಿಯೋದಲ್ಲಿ ಬಾಕ್ಸಿಂಗ್ ಬ್ಯಾಗ್ಗೆ ಪುನೀತ್ ಗಾಳಿಯಲ್ಲಿ ಹಾರಿ ಕಿಕ್ ಮಾಡುತ್ತಾರೆ. ಜೊತೆಗೆ ಒಂದು ಬ್ಯಾಕ್ ಫ್ಲಿಪ್ ಸಹ ಇದೆ. ಇದನ್ನು ನೋಡಿದ ಅಭಿಮಾನಿಗಳೂ ಫುಲ್ ಥ್ರಿಲ್ ಆಗಿದ್ದಾರೆ.