EBM News Kannada
Leading News Portal in Kannada

ವಿಂಬಲ್ಡನ್ ರದ್ದಾದರೂ ನಷ್ಟವಿಲ್ಲ, ಐಪಿಎಲ್ ರದ್ದತಿಯಿಂದ ಕೋಟ್ಯಂತರ ರೂ. ಲಾಸ್! ಏನಿದು ಲೆಕ್ಕಾಚಾರ?

0

ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವ ಟೂರ್ನಿಯಲ್ಲಿ ಅಕ್ಷರಶಃ ಹಣದ ಹೊಳೆಯೇ ಹರಿಯುತ್ತದೆ. ಇದೇ ಕಾರಣಕ್ಕೆ ಯಶಸ್ವಿ ಹನ್ನೆರಡು ಆವೃತ್ತಿಗಳನ್ನ ಕಂಡಿದೆ. ಆದರೆ, ಈ ವರ್ಷದ ಟೂರ್ನಿಗೆ ಕೊರೋನಾ ಅಡ್ಡಗಾಲು ಹಾಕಿದ ಪರಿಣಾಮ ಬಿಸಿಸಿಐ ಹಾಗೂ ಟೂರ್ನಿಯ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಭಾರೀ ನಷ್ಟದ ಭೀತಿಯಲ್ಲಿದೆ.

21 ದಿನಗಳ ಲಾಕ್​ಡೌನ್ ಮುಂದಕ್ಕೆ ಹೋಗುವ ಸಾಧ್ಯತೆ ನಿಚ್ಚಳವಾಗಿದ್ದು, ಇನ್ನೊಂದೆಡೆ ಈ ವರ್ಷದಲ್ಲಿ ಶತಾಯಗತಾಯ ಐಪಿಎಲ್ ನಡೆಸಿಯೇ ಸಿದ್ಧ ಎಂದು ಬಿಸಿಸಿಐ ನಾನಾ ಕಸರತ್ತು ನಡೆಸುತ್ತಿದೆ. ಒಂದು ವೇಳೆ ಈ ಬಾರಿ ಐಪಿಎಲ್ ನಡೆಯದೇ ಹೋದಲ್ಲಿ ಆಗುವ ನಷ್ಟ ನೂರಾರು ಕೋಟಿ..!

ಐಪಿಎಲ್ ಈ ಬಾರಿ ಕ್ಯಾನ್ಸಲ್ ಆದಲ್ಲಿ ಇನ್ಸೂರೆನ್ಸ್ ಸಹ ಲಭಿಸಲ್ಲ. ಯುದ್ಧ ಅಥವಾ ಭಯೋತ್ಪಾದನೆ ಕಾರಣಕ್ಕೆ ರದ್ದಾದಲ್ಲಿ ಇನ್ಸೂರೆನ್ಸ್ ಲಭಿಸುತ್ತದೆ. ಆದರೆ, ಈ ರೀತಿಯ ಅಂದರೆ ಸಾಂಕ್ರಾಮಿಕ ರೋಗದ ರದ್ದತಿಗೆ ಇನ್ಸೂರೆನ್ಸ್ ಹೊಂದಿಲ್ಲ. ಕೆಲ‌ ದಿನಗಳ ಹಿಂದೆ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿ ಕೊರೋನಾದಿಂದ ರದ್ದುಗೊಂಡಿತ್ತು. ಈ ಟೂರ್ನಿಯು ಸಾಂಕ್ರಾಮಿಕ ರೋಗಕ್ಕೆ ಇನ್ಸೂರೆನ್ಸ್ ಹೊಂದಿದ್ದು, ಹೀಗಾಗಿ ಭಾರೀ ನಷ್ಟದಿಂದ ಪಾರಾಗಿದೆ.

ಸ್ಟಾರ್ ಸ್ಪೋರ್ಟ್ಸ್​​ಗೆ ಸಾವಿರಾರು ಕೋಟಿ ನಷ್ಟ!

ಐಪಿಎಲ್ ಮೂಲಕ ಕೋಟ್ಯಂತರ ರೂಪಾಯಿ ಜೇಬಿಗಿಳಿಸುತ್ತಿದ್ದ ಸ್ಟಾರ್ ವಾಹಿನಿ ಈ ವರ್ಷ ದೊಡ್ಡ ನಷ್ಟದ ಅಂಚಿಗೆ ಬಂದು ನಿಂತಿದೆ. ಒಂದು ಅಂದಾಜಿನ ಪ್ರಕಾರ ಐಪಿಎಲ್ ನಡೆಯದೇ ಹೋದಲ್ಲಿ ಸ್ಟಾರ್ ಸುಮಾರು ಮೂರು ಸಾವಿರ ಕೋಟಿ‌ ನಷ್ಟ ಹೊಂದಲಿದೆ. ಅತ್ತ ಬಿಗ್​ಬಾಸ್ ಬಿಸಿಸಿಐ ಕಥೆಯೂ ಹೀಗೆ ಇದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಷ್ಟ 400 ಕೋಟಿ ರೂಪಾಯಿ ಎನ್ನಲಾಗಿದೆ.

Leave A Reply

Your email address will not be published.