EBM News Kannada
Leading News Portal in Kannada

ಎಕ್ಸ್ ರೇ ಬಳಸಿ ಐದೇ ಸೆಕೆಂಡಲ್ಲಿ ಕೊರೋನಾ ಪತ್ತೆ: ಐಐಟಿ ಪ್ರೊಫೆಸರ್​ನಿಂದ ಹೊಸ ಸಾಫ್ಟ್​ವೇರ್

0

ನವದೆಹಲಿ(ಏ. 24): ಕೊರೋನಾ ಪತ್ತೆಗೆ ಟೆಸ್ಟ್ ಕಿಟ್​ಗಳು ನಿತ್ಯವೂ ಆವಿಷ್ಕಾರಗೊಳ್ಳುತ್ತಿವೆ. ಕೊರೊನಾ ಪರೀಕ್ಷೆಯ ರಿಸಲ್ಟ್​ಗಾಗಿ ಮೊದಮೊದಲು ವಾರಗಟ್ಟಲೆ ಕಾಯಬೇಕಾಗಿತ್ತು. ಈಗ ಕೆಲವೇ ಗಂಟೆಯಲ್ಲಿ ಫಲಿತಾಂಶ ಲಭ್ಯ ಸಾಧ್ಯವಾಗಿದೆ. ಆದರೆ, ಐಐಟಿಯ ಪ್ರೊಫೆಸರ್​​ವೊಬ್ಬರು ಐದೇ ಸೆಕೆಂಡಲ್ಲಿ ಫಲಿತಾಂಶ ನೀಡುವ ತಂತ್ರಜ್ಞಾನ ಆವಿಷ್ಕರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಉತ್ತರಾಖಂಡ್​ನಲ್ಲಿರುವ ರೂರ್ಕಿಯ ಐಐಟಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಕಮಲ್ ಜೈನ್ ಅವರು ಕೋವಿಡ್ ಪತ್ತೆ ಪರೀಕ್ಷೆ ಮಾಡುವ ಸಾಫ್ಟ್​ವೇರ್ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.

ಶಂಕಿತ ರೋಗಿಗೆ ಎಕ್ಸ್​ರೇ ಸ್ಕ್ಯಾನ್ ಮಾಡಿದರೆ ಸಾಕು. ಕಮಲ್ ಜೈನ್ ಅವರ ಸಾಫ್ಟ್​ವೇರ್ ಮಿಕ್ಕ ಪತ್ತೆದಾರಿ ಕೆಲಸ ಮಾಡುತ್ತದೆ. ರೋಗಿಯ ನ್ಯುಮೋನಿಯಾ ರೋಗಕ್ಕೆ ಕೋವಿಡ್ ಕಾರಣವೇ? ಅಥವಾ ಬೇರೆ ಸೋಂಕು ಇದೆಯೇ ಎಂಬುದನ್ನು ಈ ತಂತ್ರಾಂಶ ಕಂಡುಹಿಡಿಯಬಲ್ಲುದಂತೆ.

ಇದನ್ನೂ ಓದಿ: ಕೊರೋನಾ ನಾಶಕ್ಕೆ ದೇಹದೊಳಗೆ ಅಲ್ಟ್ರಾವಯಲೆಟ್​ ಕಿರಣ ಹಾಯಿಸಿ; ಟ್ರಂಪ್​ ಸಲಹೆಗೆ ವೈದ್ಯರೇ ಶಾಕ್​

ಐಐಟಿ ಪ್ರೊಫೆಸರ್ ಅವರು ಈ ಸಾಫ್ಟ್​ವೇರ್ ಅಭಿವೃದ್ಧಿಪಡಿಸಲು 40 ದಿನ ಬೇಕಾಯಿತಂತೆ. ಕಮಲ್ ಜೈನ್ ಅವರ ಈ ಆವಿಷ್ಕಾರಕ್ಕೆ ಇದೂವರೆಗೂ ಯಾವ ವೈದ್ಯಕೀಯ ಸಂಸ್ಥೆಯು ಮಾನ್ಯತೆ ಕೊಟ್ಟಿಲ್ಲ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅವರ ಪರಾಮರ್ಶೆಗೆ ಇವರು ಕಳುಹಿಸಿದ್ಧಾರೆ. ಹಾಗೆಯೇ ತಮ್ಮ ತಂತ್ರಾಂಶಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದ್ದಾರೆ.

“ಕೋವಿಡ್-19, ನ್ಯೂಮೋನಿಯಾ, ಕ್ಷಯ (Tuberculosis) ರೋಗಿಗಳ ಸುಮಾರು 60 ಸಾವಿರದಷ್ಟು ಎಕ್ಸ್​ರೇ ಸ್ಕ್ಯಾನ್​ಗಳ ದಾಖಲೆ ಸಂಗ್ರಹಿಸಿದೆ. ಎದೆಯಲ್ಲಿನ ಕಫದ ಪ್ರಮಾಣ (Chest congestion) ವನ್ನು ಗುರುತಿಸಲೆಂದು ಈ ಮೂರು ವಿಧದ ರೋಗಿಗಳ ಎಕ್ಸ್ ರೇ ಸ್ಕ್ಯಾನ್ ದಾಖಲೆ ಪಡೆಯಲಾಗಿದ್ದುದು. ನಂತರ ಈ ಎಲ್ಲಾ ದಾಖಲೆಗಳನ್ನು ವಿಶ್ಲೇಷಿಸಿ, ಕೃತಕ ಬುದ್ಧಿಮತ್ತೆ (AI) ಆಧಾರಿತ ಡೇಟಾಬೇಸ್ ತಯಾರಿಸಿಟ್ಟುಕೊಂಡೆ. ಅಮೆರಿಕದ ಎನ್​ಐಎಚ್ ಕ್ಲಿನಿಕಲ್ ಸೆಂಟರ್​ನ ಚೆಸ್ಟ್ ಎಕ್ಸ್ ರೇ ಡೇಟಾಬೇಸ್ ಕೂಡ ನಾನು ಅನಲೈಸ್ ಮಾಡಿದೆ” ಎಂದು ಕಮಲ್ ಜೈನ್ ಹೇಳುತ್ತಾರೆ.

ಇದನ್ನೂ ಓದಿ: Plasma Therapy – ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ – ಉತ್ತಮ ಫಲಿತಾಂಶ ನೀಡಿದ ಪ್ರಯೋಗ: ಅರವಿಂದ್ ಕೇಜ್ರಿವಾಲ್

“ರೋಗಯ ಎಕ್ಸ್ ರೇ ಸ್ಕ್ಯಾನ್ ಮಾಡಿ ಆ ಚಿತ್ರವನ್ನು ಅಪ್​ಲೋಡ್ ಮಾಡಬೇಕು. ಮಿಕ್ಕಿದ್ದನ್ನು ಸಾಫ್ಟ್​ವೇರ್ ಅನಲೈಸ್ ಮಾಡುತ್ತದೆ. ಕೋವಿಡ್ ಸೋಂಕು ಇದೆಯಾ, ಸೋಂಕಿನ ತೀವ್ರತೆ ಎಷ್ಟಿದೆ, ಬ್ಯಾಕ್ಟೀರಿಯಾದಿಂದ ಸೋಂಕು ತಗುಲಿದೆಯೇ ಎಂಬಿತ್ಯಾದಿಯನ್ನು ಈ ಸಾಫ್ಟ್​ವೇರ್ ಐದು ಸೆಕೆಂಡಲ್ಲಿ ವಿಶ್ಲೇಷಿಸಿ ರಿಸಲ್ಟ್ ನೀಡಬಲ್ಲುದು” ಎಂದು ಇವರು ಮಾಹಿತಿ ನೀಡಿದ್ಧಾರೆ.ಅಂದಹಾಗೆ, ಕಮಲ್ ಜೈನ್ ಅವರಂತೆ ವಿಶ್ವದ ಹಲವೆಡೆ ಸಾಫ್ಟ್​ವೇರ್ ಅಭಿವೃದ್ಧಿಗೆ ಪ್ರಯತ್ನಗಳಾಗಿವೆಯಂತೆ. ಅಮೆರಿಕದ ಅಮೇಜಾನ್ ಯೂನಿವರ್ಸಿಟಿಯಲ್ಲಿ ಇಂತಹ ಪ್ರಯೋಗಗಳಾಗಿದ್ದರೂ ಯಾವುದೂ ಯಶಸ್ವಿಯಾಗಿಲ್ಲ ಎಂದು ಇವರು ಹೇಳಿಕೊಳ್ಳುತ್ತಾರೆ.

Leave A Reply

Your email address will not be published.