EBM News Kannada
Leading News Portal in Kannada

ಗುಜರಾತ್ ಸಿಎಂ​ಗೂ ತಟ್ಟಿದ ಕೊರೋನಾ ಬಿಸಿ: ವೈದ್ಯರ ಸಲಹೆ ಮೇರೆಗೆ ಒಂದು ವಾರ ಯಾರನ್ನು ಭೇಟಿ ಮಾಡದಿರಲು ವಿಜಯ್​​​ ರೂಪಾನಿ ನಿರ್ಧಾರ

0

ಬೆಂಗಳೂರು(ಏ.15): ಗುಜರಾತ್​​ ಮುಖ್ಯಮಂತ್ರಿ ವಿಜಯ್​​​​​ ರೂಪಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್​ ಶಾಸಕ ಇಮ್ರಾನ್​ ಖೇದವಾಲರಿಗೆ ಕೊರೋನಾ ಕಾಣಿಸಿಕೊಂಡಿತ್ತು. ಇದಾದ ಬೆನ್ನಲ್ಲೇ ಸಭೆ ನಡೆಸಿದ ಸಿಎಂ ವಿಜಯ್​​ ರೂಪಾನಿಯವರ ಆರೋಗ್ಯ ತಪಾಸಣೆ ಮಾಡಲಾಯ್ತು. ಈ ವೇಳೆ ವಿಜಯ್ ರೂಪಾನಿಯವರಿಗೆ ಯಾವುದೇ ರೀತಿಯ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ವೈದ್ಯರು ವಿಜಯ್​​ ರೂಪಾನಿಯವರನ್ನು 14 ದಿನಗಳ ಕಾಲ ಹೋಮ್​​ ಕ್ವಾರಂಟೈನ್​​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬೆನ್ನಲ್ಲೀಗ ಸಿಎಂ ವಿಜಯ್​​ ರೂಪಾನಿ ಇನ್ನೂ ಒಂದು ವಾರಗಳ ಯಾರನ್ನು ಭೇಟಿ ಮಾಡದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಗುಜರಾತ್​​ ವೈದ್ಯರ ಸಲಹೆ ಮೇರೆಗೆ ವಿಜಯ್​​ ರೂಪಾನಿ 14 ದಿನಗಳ ಕಾಲ ಹೋಮ್​​ ಕ್ವಾರಂಟೈನ್​​ನಲ್ಲಿದ್ದಾರೆ. ಹಾಗಾಗಿ ಮುಂಜಾಗೃತ ಕ್ರಮವಾಗಿ ಇನ್ನು ಒಂದು ವಾರ ಯಾರನ್ನೂ ಭೇಟಿ ಮಾಡದಿರಲು ರೂಪಾನಿ ನಿರ್ಧರಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಆದರೂ, ವೈದ್ಯರ ಸಲಹೆ ಮೇರೆಗೆ 14 ದಿನ ಮನೆಯಲ್ಲೇ ಇರಬೇಕಿದೆ ಎಂದಿದ್ದಾರೆ ವಿಜಯ್​​ ರೂಪಾನಿ.

ಇತ್ತೀಚೆಗೆ ವಿಜಯ್ ರೂಪಾನಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ ಕಾಂಗ್ರೆಸ್​ ಶಾಸಕರೊಬ್ಬರಿಗೆ ಕೊರೋನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಕಾಂಗ್ರೆಸ್​ ಶಾಸಕ ಇಮ್ರಾನ್​ ಖೇದವಾಲರಿಗೆ ಮಂಗಳವಾರ ಸಂಜೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಡೆಪ್ಯೂಟಿ ಮುನ್ಸಿಪಲ್ ಕಮಿಷನರ್ ಓಂ ಪ್ರಕಾಶ್ ಮಚ್ರಾ ತಿಳಿಸಿದ್ದಾರೆ. ಹಾಗಾಗಿ ಸದ್ಯ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಾಗಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹಾಗೂ ಇತರರು ಐಸೋಲೇಶನ್​ನಲ್ಲಿದ್ದಾರೆ. ಜತೆಗೆ ಶಾಸಕ ಖೇದವಾಲ ಸಿಎಂ ವಿಜಯ್​ ರೂಪಾನಿ ಅವರನ್ನು ಮಾತ್ರವಲ್ಲದೇ, ಗೃಹ ಸಚಿವ ಪ್ರದೀಪ್ ಸಿನ್ಹ ಜಡೇಜ ಅವರನ್ನೂ ಸಹ ಭೇಟಿಯಾಗಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಬಳಿಕ ಖೇದವಾಲ ಮಾಧ್ಯಮದವರ ಜೊತೆಯೂ ಮಾತನಾಡಿದ್ದರು ಎಂದು ತಿಳಿದು ಬಂದಿದೆ.

Leave A Reply

Your email address will not be published.