EBM News Kannada
Leading News Portal in Kannada

ಅಜ್ಞಾನ, ವಿಪರ್ಯಾಸ ಎಂದು ಬೇರೊಬ್ಬ ನಟನ ಬಗ್ಗೆ ಚೇತನ್ ಟ್ವೀಟ್; ಪರ-ವಿರೋಧ ಚರ್ಚೆ

0

ಆ ದಿನಗಳು ಖ್ಯಾತಿಯ ಚೇತನ್​ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ವ್ಯಕ್ತಿ. ಸಂಕಷ್ಟದಲ್ಲಿರುವ ಹಾಗೂ ಅನ್ಯಾಯಕ್ಕೆಒಳಗಾದವರ ಪರವಾಗಿ ಹೋರಾಟ ಮಾಡುತ್ತಿರುವ ಸಾಕಷ್ಟು ಸಲ ಟೀಕೆಗೂ ಒಳಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟ ಚೇತನ್​ ಸದಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಂದು ವಿಷಯಗಳಲ್ಲಿ ತಮ್ಮ ನಿಲುವು ತಿಳಿಸಿದಕ್ಕಾಗಿಯೇ ಟ್ರೋಲ್​ ಆಗಿದ್ದೂ ಇದೆ. ಇಂತಹ ನಟ ಈಗ ಮತ್ತೋರ್ವ ನಟನ ವಿರುದ್ಧವಾಗಿ ಹೆಸರೇಳದೆ ಟ್ವೀಟ್​ ಮಾಡಿದ್ದಾರೆ. ಇದೀಗ ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಹೌದು, ನಿನ್ನೆ ಎಲ್ಲರೂ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ನಟ ಧ್ರುವ ಸರ್ಜಾ ಸಹ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಆದರೆ ಈ ವಿಷಯವಾಗಿ ಚೇತನ್​ ಧ್ರುವ ಸರ್ಜಾ ಅವರ ಹೆಸರನ್ನು ಉಲ್ಲೇಖಿಸದೆ ಒಂದು ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.