ಕೊರೋನಾ ವಿರುದ್ಧದ ಹೋರಾಟಕ್ಕೆ ಸುಂದರ್ ಪಿಚೈ ನೆರವು; ಭಾರತ ಸರ್ಕಾರಕ್ಕೆ 5 ಕೋಟಿ ನೀಡಿದ ಗೂಗಲ್ ಮುಖ್ಯಸ್ಥ
ನ್ಯೂಯಾರ್ಕ್ (ಏಪ್ರಿಲ್ 13); ಮಾರಣಾಂತಿಕ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸಿಇಓ ಸುಂದರ್ ಪಿಚೈ ನೆರವಿನ ಹಸ್ತ ಚಾಚಿದ್ದಾರೆ.
ಇಂದು ವಿಶ್ವದ ಪ್ರಖ್ಯಾತ ಗೂಗಲ್ ಸಂಸ್ಥೆಯ ಮುಖ್ಯಸ್ಥರಾಗಿರುವ ಸುಂದರ್ ಪಿಚೈ ಚೆನ್ನೈ ಮೂಲದವರಾಗಿದ್ದು, ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ 5 ಕೋಟಿ ನೆರವು ನೀಡಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವದಾದ್ಯಂತ 18.5 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಈ ಮಹಾಮಾರಿ ವೈರಸ್ನಿಂದ 1.14 ಲಕ್ಷ ಮಂದಿ ಅಸುನೀಗಿದ್ದಾರೆ. ಭಾರತದಲ್ಲೂ 7987 ಜನರಿಗೆ ಸೋಂಕು ತಗುಲಿದ್ದು ಈ ಪೈಕಿ 308 ಜನ ಮೃತಪಟ್ಟಿದ್ದಾರೆ.