EBM News Kannada
Leading News Portal in Kannada

ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರಿಸಿ; ಕೋವಿಡ್-19 ಟಾಸ್ಕ್​ಫೋರ್ಸ್ ವೈದ್ಯರಿಂದ ಸರ್ಕಾರಕ್ಕೆ ಶಿಫಾರಸು

0

ಬೆಂಗಳೂರು (ಏ.8): ಲಾಕ್​ಡೌನ್​ ಆದೇಶದ ನಡುವೆಯೂ ಕೊರೋನಾ ವೈರಸ್​ ಹಾವಳಿ ಎಗ್ಗಿಲ್ಲದೆ ಸಾಗಿಯೇ ಇದೆ. ಕೊರೋನಾ ವೈರಸ್​ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡ ಹೊರತಾಗಿಯೂ ನಿತ್ಯ ದೇಶಾದ್ಯಂತ 500ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ, ಲಾಕ್​ಡೌನ್​ ಮುಂದುವರೆಯಲಿದೆಯೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ಮಧ್ಯೆ ಇದೇ ಆದೇಶವನ್ನು ಮುಂದುವರಿಸುವಂತೆ ರಾಜ್ಯ ಕೋವಿಡ್​-19 ಟಾಸ್ಕ್​ಫೋರ್ಸ್​ ವೈದ್ಯರು ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯದವರಗೆ ಲಾಕ್​​ಡೌನ್ ಮುಂದುವರೆಸುವುದು ಅಗತ್ಯ ಎಂದು ಕೋವಿಡ್​-19 ಟಾಸ್ಕ್​ಫೋರ್ಸ್​ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. “ಲಾಕ್​ಡೌನ್​ ಆದೇಶ ಇಡೀ ರಾಜ್ಯಕ್ಕೆ ಅನ್ವಯಿಸಬೇಕಿಲ್ಲ. ಆದರೆ, ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದ ಜಿಲ್ಲೆಗಳಲ್ಲಿ ಲಾಕ್​ಡೌನ್ ಮುಂದುವರೆಸುವುದು ಉತ್ತಮ,” ಎಂದು ರಾಜ್ಯ ಸರ್ಕಾರಕ್ಕೆ ಸಮಿತಿಗ್ಗೆ ಶಿಫಾರಸು ಮಾಡಲಿದೆ.

ಅಂದಹಾಗೆ, ಲಾಕ್​ಡೌನ್​ ಏಕೆ ಮುಂದುವರಿಸಬೇಕು?, ಮುಂದುವರಿಸದಿದ್ದರೆ ಆಗುವ ತೊಂದರೆಗಳೇನು? ಎನ್ನವ ಬಗ್ಗೆ ಈ ವರದಿಯಲ್ಲಿ ಹೇಳಲಾಗುತ್ತದೆ. ಇದರ ಆಧಾರದ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಜಯದೇವ ಹೃದ್ರೋಗ ಸಂಸ್ಥೆಯ ಡಾ. ಮಂಜುನಾಥ್, ನಾರಾಯಣ ಹೆಲ್ತ್​ನ ಡಾ.ದೇವಿ ಶೆಟ್ಟಿ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸಚ್ಚಿದಾನಂದ ಮುಂತಾದ ಹಿರಿಯ ವೈದ್ಯರು ಈ ಸಮಿತಿಲ್ಲಿದ್ದಾರೆ.

ಮಾರಕ ಕೊರೋನಾ ವೈರಸ್ ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 508 ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಇದುವರೆಗೂ ದೇಶದಲ್ಲಿ 4789 ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ 4312 ಸಕ್ರಿಯ ಪ್ರಕರಣಗಳಾಗಿವೆ. ಉಳಿದ 353 ಪ್ರಕರಣಗಳಲ್ಲಿ ಚೇತರಿಕೆ ಕಂಡುಬಂದಿದೆ. ಒಟ್ಟಾರೆ ಇದುವರೆಗೂ ಮಾರಕ ಸೋಂಕಿನಿಂದ 124 ಜನರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Leave A Reply

Your email address will not be published.