EBM News Kannada
Leading News Portal in Kannada

Bangalore Coronavirus: ಬೆಂಗಳೂರಿಗರೇ ಎಚ್ಚರ!; ನಿಮ್ಮ ಏರಿಯಾದಲ್ಲಿರುವ ಕೊರೋನಾ ಸೋಂಕಿತರ ಬಗ್ಗೆ ಇಲ್ಲಿದೆ ಮಾಹಿತಿ…

0

ಬೆಂಗಳೂರು (ಏ. 15): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಇದುವರೆಗೂ 277 ಸೋಂಕಿತ ಪ್ರಕರಣಗಳು ದಾಖಲಾಗಿವೆ, 11 ಜನರು ಮೃತಪಟ್ಟಿದ್ದಾರೆ. ಕೊರೋನಾ ವೈರಸ್​ಗೆ ತುತ್ತಾಗಿರುವ ಜಿಲ್ಲೆಯ ಪೈಕಿ ರಾಜ್ಯದ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 71 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೆಲವು ವಾರ್ಡ್​ಗಳನ್ನು ಹಾಟ್​ಸ್ಪಾಟ್​ಗಳಾಗಿ ಗುರುತಿಸಲಾಗಿದೆ.

ಬೆಂಗಳೂರಿನ ಈ ಹಾಟ್​​ಸ್ಪಾಟ್​ಗಳಲ್ಲಿ ಇರುವವರು ಮನೆಯಿಂದ ಹೊರ ಬರುವ ಮುನ್ನ ಒಮ್ಮೆ ಯೋಚಿಸಿ. ಸಿಲಿಕಾನ್​ ಸಿಟಿಯಲ್ಲಿ ಪ್ರಮುಖವಾಗಿ 8 ವಾರ್ಡ್​ಗಳನ್ನು ಹಾಟ್​ಸ್ಪಾಟ್​ ಎಂದು ಪರಿಗಣಿಸಲಾಗಿದೆ. ಅದಕ್ಕೆ ಕಾರಣವೂ ಇದೆ. ಈ ವಾರ್ಡ್​ಗಳಲ್ಲಿರುವ ಕೊರೋನಾ ಸೋಂಕಿತ ರೋಗಿಗಳು ಸಾಕಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿ, ಆ ಸಂಪರ್ಕಿತರಿಗೆ ಒಂದುವೇಳೆ ಕೊರೋನಾ ಪಾಸಿಟಿವ್ ಇದ್ದರೆ ಸುಲಭವಾಗಿ ಇಡೀ ಏರಿಯಾದಲ್ಲಿ ಕೊರೋನಾ ಹರಡುತ್ತದೆ. ಹೀಗಾಗಿ, ಈ ವಾರ್ಡ್​ಗಳಲ್ಲಿ ವಾಸವಾಗಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ಬೆಂಗಳೂರಿನ ಕೊರೋನಾ ಸೋಂಕಿತರ ಪೈಕಿ 50 ಜನರಿಗಿಂತ ಹೆಚ್ಚು ಜನರ ಜೊತೆ ಒಡನಾಟ ಹೊಂದಿರುವವರನ್ನು ಬಿಬಿಎಂಪಿ ಪಟ್ಟಿ ಮಾಡಿದೆ. ಆ ಸಂಪರ್ಕಿತರ ಮೇಲೆ ಕೂಡ ನಿಗಾ ವಹಿಸಲಾಗಿದೆ. ಯಾವ ವಾರ್ಡ್​ನಲ್ಲಿ ಎಷ್ಟು ಕೊರೋನಾ ಶಂಕಿತರಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Leave A Reply

Your email address will not be published.