EBM News Kannada
Leading News Portal in Kannada

ವಿಜಯ್​ ಅಭಿಮಾನಿಯ ಸಾವಿನಲ್ಲಿ ಅಂತ್ಯಗೊಂಡ​ ತಲೈವಾ ಹಾಗೂ ದಳಪತಿ ಅಭಿಮಾನಿಗಳ ನಡುವಿನ ಗಲಾಟೆ..!

0

ಇಬ್ಬರು ಸ್ಟಾರ್​ನಟರ ಅಭಿಮಾನಿಗಳ ನಡುವೆ ವಾರ್​ ಆಗೋದು ಸಾಮಾನ್ಯ. ಇಂತಹ ವಾರ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತದೆ. ನಿಜ ಜೀವನದಲ್ಲಿ ಅಭಿಮಾನಿಗಳ ನಡುವಿನ ಜಗಳ ತಾರಕಕ್ಕೇರಿದರೆ ಏನಾಗಬಹುದು ಎನ್ನುವುದಕ್ಕೆ ತಮಿಳುನಾಡಿನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮರಕ್ಕಾನಂನಲ್ಲಿ ಇದೇ ತಿಂಗಳ 23ರಂದು ರಜಿನಿಕಾಂತ್​ ಹಾಗೂ ವಿಜಯ್​ ಅವರ ಫ್ಯಾನ್ಸ್​ ನಡುವೆ ಜಗಳವಾಗಿದೆ. ಅದು ಕೊರೋನಾ ವಿರುದ್ಧದ ಹೋರಾಟಕ್ಕೆ ರಜಿನಿ ಹಾಗೂ ವಿಜಯ್​ ಅವರಲ್ಲಿ ಯಾರು ಹೆಚ್ಚಾಗಿ ಧನ ಸಹಾಯ ಮಾಡಿದ್ದಾರೆ ಎಂಬ ವಿಷಯಕ್ಕೆ ಗಲಾಟೆ ಆಗಿದೆ.

ಈ ಗಲಾಟೆ ತಾರಕಕ್ಕೇರಿದ್ದು, ರಜಿನಿ ಅಭಿಮಾನಿಯಾದ ದಿನೇಶ್ ಬಾಬು ಹಾಗೂ ವಿಜಯ್​ ಅಭಿಮಾನಿ ಯುವರಾಜ್​ ನಡುವೆ ಈ ಮೇಲೆ ಹೇಳಿದ ವಿಷಯವಾಗಿ ವಾಗ್ವಾದ ನಡೆದಿದೆ. ದಿನೇಶ್ ಹಾಗೂ ಯುವರಾಜ್​ ಇಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ನೆಚ್ಚಿನ ನಟರ ವಿಷಯವಾಗಿ ನಡೆದ ವಾಗ್ವಾದ ಮಿತಿ ಮೀರಿದಾಗ ದಿನೇಶ್​ ಬಾಬು ಹಾಗೂ ಯುವರಾಜ್​ ಕೈ ಕೈ ಮಿಲಾಯಿಸಿದ್ದಾರೆ. ಆಗ ಕೆಳಗೆ ಬಿದ್ದ ಯುವರಾಜ್​ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಗಾಬರಿಗೊಂಡ ದಿನೇಶ್​ ತಲೆಮರೆಸಿಕೊಂಡಿದ್ದರು.

Leave A Reply

Your email address will not be published.