1G, 2G ಆವಿಷ್ಕಾರ ಹುಟ್ಟಿದ್ದೇಗೆ?; ನೀವು ತಿಳಿಯಲೇ ಬೇಕು ಈ ವಿಚಾರ
ಮೊಬೈಲ್ ಎಂದರೆ ಜನರಿಗೆ ಮಿನಿ ಸ್ವರ್ಗ ಇದ್ದಂತೆ. ಅಂಗೈ ಅಗಲದ ಚಿಕ್ಕ ಸಾಧನದ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು ತಮಗೇನು ಬೇಕು ಅದು ಮನೆ ಬಾಗಿಲಿಗೆ ಬರುವಂತಹ ತಂತ್ರಜ್ಞಾನವಿಂದು ಬೆಳದುನಿಂತಿದೆ. ಆದರೆ 80 ವರ್ಷಗಳ ಹಿಂದೆ ಕಣ್ಣು ಹಾಯಿಸಿದರೆ ಅಂಚೆಯೇ ಅವರಿಗೆ ಆಪತ್ಬಾಂಧವ. ಇಂದು ವಾಟ್ಸ್ಆ್ಯಪ್, ಮೆಸೆಂಜರ್, ಟೆಲಿಗ್ರಾಂ ಹೀಗೆ ಸಾಕಷ್ಟು ಆ್ಯಪ್ಗಳ ಮೂಲಕ ನಿಮಿರ್ಷಾಧದಲ್ಲೇ ಮೆಸೇಜ್ ಕಳುಹಿಸಬಹುದು. ಆದರೆ ಹಿಂದೆ ಹಾಗಿರಲಿಲ್ಲ ಅಂಚೆ, ಟೆಲಿಗ್ರಾಂ ಬಿಟ್ಟರೆ ಬೇರೆ ಗತಿ ಇರಲಿಲ್ಲ.
ಒಂದು ಅಂಚೆ ಕಳುಹಿಸಿದರೆ ಅದು ತಲುಪ ಬೇಕಾದರೆ ವಾರ ಗಟ್ಟಲೆ, ಅಬ್ಬಬ್ಬಾ ಅಂದರೆ ತಿಂಗಳು ಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ಅದು ಕೂಡ ಸಾವಿನ ಸುದ್ದಿ ಅಥವಾ ತುರ್ತು ಸುದ್ದಿ ತಲುಪಿಸಲು ಮಾತ್ರ ಬಳಸುತ್ತಿದ್ದರು. ಬಡವರಿಗೆ ಅಂಚೆ, ಟೆಲಿಗ್ರಾಂ ಕೂಡ ಅಂದು ಕಬ್ಬಿಣದ ಕಡಲೆಯಾಗಿತ್ತು!. ಆದರೆ ಇಂದು ತಂತ್ರಜ್ಞಾನ ಆಗಾಧ ಮಟ್ಟಿಗೆ ಬೆಳದು ನಿಂತಿದೆ. ಸೂಕ್ಷವಾಗಿ ಗಮನಿಸಿದರೆ ಒಂದೇ ಕ್ಲಿಕ್ ಸಾಕು ಕೆಲವೇ ಸೆಕೆಂಡುಗಳಲ್ಲಿ ನಿಮ್ಮಿಷ್ಟದ ವ್ಯಕ್ತಿ, ವಸ್ತುಗಳು ಕಣ್ಣ ಮುಂದೆ ಹಾಜರು.!
ಅಂದಹಾಗೆ, ಜಗತ್ತಿಗೆ ಮೊಬೈಲ್ ಎಂದು ಪರಿಚಯವಾಯಿತೋ ಅಂದಿನಿಂದ ಮೊಬೈಲ್ ಫೋನ್ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ತಂತ್ರಜ್ಞಾನ ಕೂಡ ಬೆಳೆಯುತ್ತಾ ಬಂದಿದೆ. 0ಜಿ ಯಲ್ಲಿದ್ದ (ಜಿ ಎಂದರೆ ಜನರೇಜನ್) ತಂತ್ರಜ್ಞಾನ ಇಂದು 5ಜಿ ತನಕ ಬಳಕೆಯಾಗುತ್ತಿದೆ. ಹಾಗಿದ್ದರೆ ಮೊಬೈಲ್ ಜನರೇಶನ್ ಬಗ್ಗೆ, ನಾವು-ನೀವು ಬಳಸಿರುವ ಮತ್ತು ಬಳಸುತ್ತಿರುವ 2ಜಿ, 3ಜಿ, 4ಜಿ, 5ಜಿ ಬಗ್ಗೆ ಒಮ್ಮೆ ಮೆಲುಕು ಹಾಕೋಣ…
ಮನುಷ್ಯನ ಮೇಲೆ ಗಂಭೀರವಾಗಿ ಪರಿಣಾಮ ಬೀರಿರುವ ಅಂಶಗಳ ಪೈಕಿ ಮೊಬೈಲ್ ಕೂಡ ಒಂದು. ನಾಲ್ಕು ಗೋಡೆಗಳ ನಡುವೆ ಇದ್ದ ಮಾನವನ ಸಂವಹನ ಇಂದು ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದು ಈ ಸಾಧನದ ಸಾಧನೆ. ಇನ್ನು ತಂತ್ರಜ್ಞಾನದ ಸ್ವರೂಪವನ್ನು ಆಧರಿಸಿ ಮೊಬೈಲ್ ಬೆಳವಣಿಗೆಯನ್ನು ಹಲವು ತಲೆಮಾರುಗಳಾಗಿ (ಜನರೇಶನ್ಗಳಾಗಿ) ವಿಂಗಡಿಸಲಾಗಿದೆ.