EBM News Kannada
Leading News Portal in Kannada

ಬೆಂಗಳೂರಿನಲ್ಲಿ ಸ್ಪೋಟಕ ರಾಸಾಯನಿಕ ವಸ್ತುಗಳ ಅಕ್ರಮ ಸಂಗ್ರಹ; ಸಿಸಿಬಿ ಪೊಲೀಸರ ದಾಳಿ

0

ಬೆಂಗಳೂರು(ಏ.06): ಭಾರೀ ಪ್ರಮಾಣದ ಸ್ಪೋಟಕ ರಾಸಾಯನಿಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಸ್ಥಳದಲ್ಲಿ ಸಿಸಿಬಿ ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದಾರೆ. ವಿಲ್ಸನ್​ ಗಾರ್ಡನ್​ ಪೊಲೀಸ್ ಠಾಣಾ ವ್ಯಾಪ್ತಿಯ ಸುಧಾಮನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ರೇಣುಕಾ ಪ್ರಸಾದ್​ (53) ಅಕ್ರಮವಾಗಿ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿದ್ದ ವ್ಯಕ್ತಿ. ಸಿಸಿಬಿ ಪೊಲೀಸರು ದಾಳಿ ನಡೆಸಿ 400 ಲೀಟರ್ ಐಸೋಪ್ರೊಫೆಲ್ ಹಾಲ್ಕೋಹಾಲ್, 210 ಲೀಟರ್ ಟಾಲಿನ್‌, 100 ಲೀಟರ್ ಟರ್ಪಂಟೈನ್ ಆಯಿಲ್, 600 ಲೀಟರ್ ಅಸಿಟೋನ್ , 60 ಬೆಂಜೆಲ್ ಹಾಲ್ಕೋಹಾಲ್ ಕ್ಯಾನ್​ಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಪ್ರಸಾದ್​ ನಕಲಿ ಸ್ಯಾನಿಟೈಸರ್ ಉತ್ಪಾದಿಸುವ ವ್ಯಕ್ತಿಗಳಿಗೆ ಈ ರಾಸಾಯನಿಕಗಳನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೊರೋನಾ ಭೀತಿ ಹೆಚ್ಚಾದಂತೆ ಬೆಂಗಳೂರಿನಲ್ಲಿ ನಕಲಿ ಸ್ಯಾನಿಟೈಸರ್ ದಂಧೆಯೂ ಹೆಚ್ಚಾಗಿದೆ. ನಕಲಿ ಸ್ಯಾನಿಟೈಸರ್ ಉತ್ಪಾದನೆ ಬಳಕೆಗೆ ಸರಬರಾಜು ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.