EBM News Kannada
Leading News Portal in Kannada

ಹಾವೇರಿ: ಎಸ್​ಬಿಐ ನಿವೃತ್ತ ಮ್ಯಾನೇಜರ್​ಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು – Kannada News | SBI retired manager stabbed to death in Haveri Get admitted to hospital

0


ಹಾವೇರಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಎಸ್​ಬಿಐ ನಿವೃತ್ತ ಮ್ಯಾನೇಜರ್​ಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೂಡಲೇ ಗಾಯಾಳುವನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ ಎಸ್​ಬಿಐ ನಿವೃತ್ತ ಮ್ಯಾನೇಜರ್​ಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನ

ಹಾವೇರಿ, ಆ.10: ಎಸ್​ಬಿಐ(SBI)ನಿವೃತ್ತ ಮ್ಯಾನೇಜರ್​ಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ಹೌದು, ಹಾವೇರಿ(Haveri)ಯ ಬಸವೇಶ್ವರನಗರದಲ್ಲಿ ವಾಸಿಸುತ್ತಿದ್ದ  ನಿವೃತ್ತ ಬ್ಯಾಂಕ್​ ಮ್ಯಾನೇಜರ್​ ಜಯರಾಂ ಕೊಲ್ಲಾಪುರ ಅವರು ಬೈಕ್​ನಲ್ಲಿ ಪುತ್ರನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಈ ವೇಳೆ ಎರಡು ಬೈಕ್​ಗಳಲ್ಲಿ ಬಂದಿದ್ದ ನಾಲ್ವರು ಅಪರಿಚಿತರು, ಅಡ್ಡಗಟ್ಟಿ ಜಯರಾಂ ಕೊಲ್ಲಾಪುರಗೆ 3 ಬಾರಿ ಚಾಕು ಇರಿದು, ಎಸ್ಕೇಪ್​ ಆಗಿದ್ದಾರೆ. ಕೂಡಲೇ ಗಾಯಾಳು ಜಯರಾಂ ಅವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರುಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಬೀದರ್: ಜಾನುವಾರುಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ವ್ಯಕ್ತೊಯೊರ್ವನನ್ನ ಬೀದರ್​ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್​ನ ಜೈ ಭೀಮ್ ಬಡಾವಣೆಯ ಮನೆಯ ಮುಂದೆ ಕಟ್ಟಿದ್ದ ನಾಲ್ಕು ಜಾನುವಾರುಗಳನ್ನು ಕದ್ದುಕೊಂಡು ಹೋಗಿ ಮೈಲಾರ ಮಲ್ಲಣ್ಣ ಜಾನುವಾರು ಸಂತೆಯಲ್ಲಿ ಮಾರಾಟ ಮಾಡಿದ್ದಾನೆ. ಮಾರಾಟ ಮಾಡಿದ ಹಣವನ್ನು ತೆಗೆದುಕೊಂಡು ಬರುವಾಗ ಖಚಿತ ಮಾಹಿತಿ ಆದಾರದ ಮೇಲೆ ವ್ಯಕ್ತಿಯನ್ನ ಬಂಧಿಸಿದ್ದು, ಬಂಧಿತನಿಂದ 70 ಸಾವಿರ ರೂಪಾಯಿ ಹಣವನ್ನ ವಶಕ್ಕೆ ಪಡೆಯಲಾಗಿದೆ.

ಇನ್ನು ಈ ಕುರಿತು ಬೀದರ್ ನಗರದ ನ್ಯೂವ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಪೊಲೀಸರು ಜಾನುವಾರು ಕದಿಯುತ್ತಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ. ಜೊತೆಗೆ ಅವುಗಳನ್ನು ಸಾಗಿಸಿದ ಎರಡು ಗೂಡ್ಸ್​ ಆಟೋವನ್ನು ವಶಕ್ಕೆ ಪಡೆದಿದ್ದು, ಕಳ್ಳನನ್ನು ಜೈಲಿಗಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್​ ಸಿಬ್ಬಂದಿಗೆ ಎಸ್ಪಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.