EBM News Kannada
Leading News Portal in Kannada

ಹೆಚ್​ಡಿಎಫ್​ಸಿ ಬ್ಯಾಂಕ್​ನ 1.75 ಕೋಟಿ ಷೇರು ಖರೀದಿಸಿದ ಚೀನಾ

0

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ಅಗ್ರಗಣ್ಯ ಖಾಸಗಿ ಬ್ಯಾಂಕ್​ಗಳಲ್ಲೊಂದೆನಿಸಿದ ಹೆಚ್​ಡಿಎಫ್​ಸಿಯಲ್ಲಿ ಚೀನಾದ ಪೀಪಲ್ಸ್ ಬ್ಯಾಂಕ್ ತನ್ನ ಹೂಡಿಕೆ ಹೆಚ್ಚಿಸಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ(ಪಿಬಿಒಸಿ) ಹೆಚ್​ಡಿಎಫ್​ಸಿಯ 1.75 ಕೋಟಿ ಷೇರುಗಳನ್ನ ಖರೀದಿಸಿದೆ. ಇದರೊಂದಿಗೆ ಹೆಚ್​ಡಿಎಫ್​ಸಿಯಲ್ಲಿ ಶೇ. 0.80ಯಷ್ಟಿದ್ದ ತನ್ನ ಪಾಲನ್ನು ಶೇ. 1.1ಕ್ಕೆ ಹೆಚ್ಚಿಸಿಕೊಂಡಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವವೇ ಪರದಾಡುತ್ತಿರುವಾಗ ಚೀನಾದ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರುವುದು ಗಮನಾರ್ಹ.

ಹೆಚ್​ಡಿಎಫ್​ಸಿ ಸಂಸ್ಥೆ ಸೆನ್ಸೆಕ್ಸ್​ಗೆ ಬಿಡುಗಡೆ ಮಾಡಿದ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಭಾರತದ ಇತರ ಕೆಲ ಬ್ಯಾಂಕ್​ಗಳಂತೆ ಹೆಚ್​ಡಿಎಫ್​ಸಿ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಷೇರುಮಾರುಕಟ್ಟೆ ಪ್ರಪಾತಕ್ಕೆ ಕುಸಿದಾಗ ಹೆಚ್​ಡಿಎಫ್​ಸಿಯ ಷೇರುಗಳೂ ಕೂಡ ಶೇ. 25ರಷ್ಟು ನಷ್ಟ ಮಾಡಿಕೊಂಡಿದ್ದವು. ಬಿಎಸ್​ಇ ಸೆನ್ಸೆಕ್ಸ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಷೇರುಗಳಲ್ಲಿ ಹೆಚ್​ಡಿಎಫ್​ಸಿಯೂ ಒಂದು.

ಇದನ್ನೂ ಓದಿ: ಸೋಂಕು ನಿವಾರಕ ಟನಲ್​ಗಳಿಂದಲೇ ಸಮಸ್ಯೆ; ಯಡವಟ್ಟಾಯ್ತು ಸರ್ಕಾರದ ಹೊಸ ಪ್ರಯತ್ನ

ಈ ಸಂದರ್ಭದಲ್ಲೇ ಚೀನಾದ ಬ್ಯಾಂಕು ಹೆಚ್​ಡಿಎಫ್​​ಸಿಯ ಮೇಲೆ ಹೂಡಿಕೆ ಹೆಚ್ಚಿಸಿದೆ. ಆದರೆ, ನಿಯಮಾವಳಿ ಪ್ರಕಾರ ಚೀನಾ ಬ್ಯಾಂಕು ಶೇ. 1ಕ್ಕಿಂತ ಹೆಚ್ಚು ಷೇರುಗಳನ್ನ ಹೊಂದುವಂತಿಲ್ಲ. ಈ ನಿಯಮ ಮೀರಿ ಶೇ. 1.1ರಷ್ಟು ಷೇರು ಹೊಂದಿದೆ. 2019ರ ಮಾರ್ಚ್​ನಲ್ಲಿ ಹೆಚ್​ಡಿಎಫ್​ಸಿಯಲ್ಲಿ ಚೀನಾ ಬ್ಯಾಂಕು ಶೇ. 0.8 ಪಾಲು ಹೊಂದಿತ್ತು. ಹಂತ ಹಂತವಾಗಿ ಅದು ಷೇರುಗಳನ್ನ ಖರೀಸುತ್ತಾ ಬಂದಿದೆ ಎಂದು ಹೆಚ್​ಡಿಎಫ್​ಸಿ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ತ್ರಿ ಹೇಳಿದ್ದಾರೆ.

ಹೆಚ್​ಡಿಎಫ್​ಸಿಯಲ್ಲಿ ಹೂಡಿಕೆ ಮಾಡಲು ಹಲವು ಪ್ರಬಲ ಸಂಸ್ಥೆಗಳು ಆಸಕ್ತಿ ಹೊಂದಿವೆ. ಸರ್ಕಾರಿ ಸ್ವಾಮ್ಯದ ಎಲ್​ಐಸಿ ಸಂಸ್ಥೆ ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಹೆಚ್​ಡಿಎಫ್​ಸಿಯಲ್ಲಿ ಹೂಡಿಕೆ ಮಾಡಿತ್ತು. ಶೇ. 4.21ರಷ್ಟಿದ್ದ ತನ್ನ ಪಾಲನ್ನು ಶೇ. 4.67ಕ್ಕೆ ಹೆಚ್ಚಿಸಿತ್ತು.

Leave A Reply

Your email address will not be published.