EBM News Kannada
Leading News Portal in Kannada

ವಿಶ್ವದ ಅತ್ಯಂತ ದುಬಾರಿ ತಿನಿಸುಗಳಿವು; ಲಕ್ಷಗಳಲ್ಲಿದೆ ಇವುಗಳ ಬೆಲೆ…! | Kannada Dunia | Kannada News | Karnataka News

0


ಚಿನ್ನ ಈಗ ಬಹಳ ದುಬಾರಿ. ಆಭರಣಗಳನ್ನು ಖರೀದಿಸುವುದೇ ಕಷ್ಟ, ಅಂಥದ್ರಲ್ಲಿ ಚಿನ್ನದ ಭಕ್ಷ್ಯಗಳನ್ನು ಸವಿಯೋದು ಅಸಾಧ್ಯದ ಮಾತು. ಚಿನ್ನ ಬೆರೆಸಿದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ಇದರಲ್ಲಿ ಖಾದ್ಯ ಚಿನ್ನವನ್ನು ಬಳಸಲಾಗುತ್ತದೆ. ಹಾಗಾಗಿ ಈ ತಿನಿಸುಗಳು ಕೂಡ ಬಹಳ ದುಬಾರಿ. ಚಿನ್ನದ ಸ್ಪರ್ಶ ಹೊಂದಿರುವ ವಿಶ್ವದ 6 ಐಷಾರಾಮಿ ಮತ್ತು ಅತ್ಯಂತ ದುಬಾರಿ ಭಕ್ಷ್ಯಗಳು ಯಾವುದು ಅನ್ನೋದನ್ನು ನೋಡೋಣ.

ಗೋಲ್ಡನ್ ಫ್ರೈಡ್ ರೈಸ್

ಥೈಲ್ಯಾಂಡ್‌ನ “ದಿ ಗೋಲ್ಡನ್ ಶೆಲ್” ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ಈ ಫ್ರೈಡ್ ರೈಸ್ ರಾಯಲ್ ಫುಡ್‌ನಂತೆ ಕಾಣುತ್ತದೆ. ಇದು ನಳ್ಳಿ, ಏಡಿ ಮತ್ತು ಅಣಬೆಗಳೊಂದಿಗೆ ಖಾದ್ಯ ಚಿನ್ನವನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದರ ಬೆಲೆ ಸುಮಾರು 50 ಸಾವಿರ ರೂ.

ಜಕುರಾ ಹೂ ಸುಶಿ

ಜಪಾನ್‌ನ “ಸುಶಿ ಯಸುದಾ” ರೆಸ್ಟೊರೆಂಟ್‌ನಲ್ಲಿ ಲಭ್ಯವಿರುವ ಈ ಸುಶಿ ಬಹಳ ರುಚಿಕರ. ನೋಡಲು ತುಂಬಾ ಸುಂದರವಾಗಿರುತ್ತದೆ. ಇದನ್ನು ತಾಜಾ ಸಮುದ್ರಾಹಾರ ಮತ್ತು ಚಿನ್ನದ ಎಲೆಗಳಿಂದ ಮಾಡಿದ ಸುಂದರವಾದ ಸಕುರಾ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದರ ಬೆಲೆ ಸುಮಾರು 70 ಸಾವಿರ ರೂ.

ಡಕ್ಡೋರ್ ಕಾಫಿ

ವಿಯೆಟ್ನಾಂನ “ಗೇನ್ಸ್‌ವಿಲ್ಲೆ ಎಲ್’ಇಪಿ” ಹೋಟೆಲ್‌ನಲ್ಲಿ ಲಭ್ಯವಿರುವ ಈ ಕಾಫಿ ಶ್ರೀಮಂತರಿಗೆ ಮಾತ್ರ. ಇದರಲ್ಲಿ ಅತ್ಯಂತ ದುಬಾರಿ ಕಾಫಿ “ಕಾಯೋಪಿ ಲುವಾಕ್” ಅನ್ನು ಬಳಸಲಾಗುತ್ತದೆ. ಇದನ್ನು ಏಷ್ಯನ್ ಪಾಮ್ ಮಾರ್ಟೆನ್ಸ್ ಎಂಬ ಪ್ರಾಣಿಯ ಮಲದಿಂದ ಹೊರತೆಗೆಯಲಾಗುತ್ತದೆ. ಅಲ್ಲದೆ ಈ ಕಾಫಿಗೆ ಚಿನ್ನದ ಲೇಪನವಿದೆ. ಒಂದು ಕಪ್ ಕಾಫಿಯ ಬೆಲೆ ಸುಮಾರು 1 ಲಕ್ಷ ರೂ.

ಪಿಜ್ಜಾ ಲೂಯಿಸ್ XIII

ಇಟಲಿಯ “ರೆನಾಟೊ ವಯೋಲಾ” ರೆಸ್ಟೋರೆಂಟ್‌ನಲ್ಲಿ ಲಭ್ಯವಿರುವ ಈ ಪಿಜ್ಜಾ ಅತ್ಯಂತ ದುಬಾರಿಯಾಗಿದೆ. ಇದು ನಳ್ಳಿ, ಕ್ಯಾವಿಯರ್ ಮತ್ತು ಅಮೂಲ್ಯವಾದ ಕಾಗ್ನ್ಯಾಕ್ ಲೂಯಿಸ್ XIII ಅನ್ನು ಬಳಸಿ ತಯಾರಿಸಿದ ಪಿಜ್ಜಾ. ಅದರ ಮೇಲೆ 24 ಕ್ಯಾರೆಟ್ ಚಿನ್ನದ ಪದರವನ್ನು ಎರಕ ಹೊಯ್ದಿರುತ್ತಾರೆ. ಇದರ ಬೆಲೆ ಸುಮಾರು 2.5 ಲಕ್ಷ ರೂ.

ವಾಗ್ಯು ಬೀಫ್ ರಿಬೆಯೆ ಎ ಲಾ ಓರ್

ಜಪಾನ್‌ನ ಮಿಯಾಜಾಕಿ ನಗರದಲ್ಲಿ ಕಂಡುಬರುವ ಅಪರೂಪದ ವಾಗ್ಯು ಗೋಮಾಂಸವನ್ನು ವಿಶ್ವದ ಅತ್ಯಂತ ರುಚಿಕರವಾದ ಮತ್ತು ದುಬಾರಿ ಗೋಮಾಂಸವೆಂದು ಪರಿಗಣಿಸಲಾಗಿದೆ. “ರೆಸ್ಟೋರೆಂಟ್ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ” ನಲ್ಲಿ ಈ ಮಾಂಸವನ್ನು 24 ಕ್ಯಾರೆಟ್ ಚಿನ್ನದ ಎಲೆಗಳಲ್ಲಿ ಸುತ್ತಿ ಬಡಿಸಲಾಗುತ್ತದೆ. ಇದರ ಬೆಲೆ ಸುಮಾರು 4 ಲಕ್ಷ ರೂಪಾಯಿ.

ಗೋಲ್ಡನ್ ಫ್ರೋಜನ್ ಫ್ಲಫ್ ಸಂಡೇ

ನ್ಯೂಯಾರ್ಕ್ ನಗರದ “ಸೆರೆಂಡಿಪಿಟಿ 3” ರೆಸ್ಟೊರೆಂಟ್‌ನಲ್ಲಿ ಲಭ್ಯವಿರುವ ಈ ಐಸ್‌ಕ್ರೀಂ ರಾಜಮನೆತನದ ಆಹಾರದಂತೆ ಕಾಣುತ್ತದೆ. 28 ಬಗೆಯ ಕೋಕೋ, ಸಿಹಿ ಚಟ್ನಿ, ಟ್ರಫಲ್ ಚಾಕೊಲೇಟ್ ಮತ್ತು 23 ಕ್ಯಾರೆಟ್ ಚಿನ್ನದ ತುಂಡುಗಳಿಂದ ಮಾಡಿದ ಐಸ್ ಕ್ರೀಮ್‌ನ ಮಿಶ್ರಣ ಇದು. ಇದರ ಬೆಲೆ ಅಂದಾಜು 20.75 ಲಕ್ಷ ರೂಪಾಯಿ.

Leave A Reply

Your email address will not be published.