EBM News Kannada
Leading News Portal in Kannada

ATM ಮತ್ತು ಫಾರ್ಮಸಿ ಅಂಗಡಿಗಳಲ್ಲಿಯೂ ಏರ್‌ಟೆಲ್ ರೀಚಾರ್ಜ್ ಸೌಲಭ್ಯ!

0

ಕೋವಿಡ್-19 ಸಾಂಕ್ರಾಮಿಕ ಸೋಂಕು ಇಡೀ ವಿಶ್ವದಲ್ಲಿಯೇ ತಲ್ಲಣ ಮೂಡಿಸಿದೆ. ಭಾರತದಲ್ಲಿಯೂ ಕರಿಛಾಯೆಯನ್ನು ಬೀರಿದೆ. ವೈರಸ್‌ ವ್ಯಾಪಕವಾಗಿ ಹರಡುವುದನ್ನು ತಡೆಯುಬ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಸೂಚಿಸಿದೆ. ಲಾಕ್‌ಡೌನ್‌ನಿಂದಾಗಿ ಎಲ್ಲರು ಮನೆಯಲ್ಲಿಯೇ ಇರುವುದರಿಂದ ಬಹುತೇಕರಿಗೆ ಮೊಬೈಲ್ ರೀಚಾರ್ಜ್ ಮಾಡಿಸುವುದು ತೊಂದರೆ ಅನಿಸಿದೆ. ಈ ನಿಟ್ಟಿನಲ್ಲಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ರೀಚಾರ್ಜ್ ಮಾಡಿಸಿಕೊಳ್ಳಲು ಸಹಾಯಕ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಹೌದು, ಪ್ರಸ್ತುತ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಆದ್ರೆ ಜನರು ತಮಗೆ ಅಗತ್ಯ ಇರುವ ದೈನಂದಿನ ವಸ್ತುಗಳನ್ನು ಖರೀದಿಸಲು ಲಾಕ್‌ಡೌನ್‌ನಿಂದ ವಿನಾಯಿತಿ ಇದೆ. ದೈನಂದಿನ ಅಗತ್ಯ ವಸ್ತುಗಳು ಸಿಗುವ ಸ್ಥಳಗಳಲ್ಲಿಯೇ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳುವ ಅವಕಾಶವನ್ನು ಏರ್‌ಟೆಲ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಹೀಗಾಗಿ ಗ್ರಾಹಕರು ದಿನಸಿ ಅಂಗಡಿ, ಎಟಿಎಮ್ ಸೆಂಟರ್ ಮತ್ತು ಫಾರ್ಮಸಿ ಅಂಗಡಿಗಳಲ್ಲಿಯೂ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಬಹುದು.

ಪ್ರಸ್ತುತ ಮೊಬೈಲ್ ರೀಚಾರ್ಜ್ ಮಾಡಿಸಲು ಆನ್‌ಲೈನ್‌ನಲ್ಲಿ ಹಲವು ರೀಚಾರ್ಜ್ ಆಯ್ಕೆಗಳು ಇವೆ. ಅನೇಕರು ಮನೆಯಿಂದಲೇ ಆನ್‌ಲೈನ್‌ ತಾಣಗಳ ಮೂಲಕ, ಯುಪಿಐ ಆಪ್‌ಗಳ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆದರೆ ಆನ್‌ಲೈನ್‌ ತಾಣದಲ್ಲಿ ರೀಚಾರ್ಜ್ ಮಾಡಿಕೊಳ್ಳುವ ಸೌಲಭ್ಯದ ಬಗ್ಗೆ ತಿಳಿದಿರದ ಅನೇಕ ಜನರಿದ್ದಾರೆ. ಅಂತಹ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಏರ್‌ಟೆಲ್ ಈ ಹೊಸ ರೀಚಾರ್ಜ್ ವ್ಯವಸ್ಥೆ ಜಾರಿ ಮಾಡಿದೆ.

ಏರ್‌ಟೆಲ್‌ ಗ್ರಾಹಕರು ಆನ್‌ಲೈನ್‌ ಮೂಲಕ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಇನ್ನು ಆನ್‌ಲೈನ್ ರೀಚಾರ್ಜ್ ಮಾಡುವ ಬಗ್ಗೆ ತಿಳಿದಿರದಿದ್ದರೇ ದಿನಸಿ ಅಂಗಡಿಗಳು, ಫಾರ್ಮಸಿ ಅಂಗಡಿಗಳು ಮತ್ತು ಎಟಿಎಮ್‌ ಸೆಂಟರ್‌ಗಳಲ್ಲಿಯೂ ಸುಲಭವಾಗಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಅಪೋಲೊ ಮತ್ತು ಬಿಗ್‌ ಬಜಾರ್‌ನಂತಹ ಆಯ್ದ ಅಗತ್ಯ ಸ್ಥಳಗಳಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದು.

Leave A Reply

Your email address will not be published.