EBM News Kannada
Leading News Portal in Kannada

Juices for Hair Growth : ಈ ರಸಗಳನ್ನು ತಲೆಗೆ ಹಚ್ಚಿದರೆ ಕೂದಲು ಮಂದವಾಗಿ ಬೆಳೆಯುವುದು

0

ಕೂದಲಿನ ಆರೋಗ್ಯ, ಅದರ ಹೊಳಪು ಇವು ನಮ್ಮೆಲ್ಲರ ಕನಸು. ಆದರೆ ಇವತ್ತಿನ ಪ್ರದೂಷಣೆ, ಧೂಳು ಹಾಗೂ ನಮ್ಮ ಬದಲಾದ ಜೀವನ ಶೈಲಿಗಳಿಂದಾಗಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ! ಆದರೆ ಸರಿಯಾದ ಪೋಷಣೆ ಹಾಗೂ ಆರೋಗ್ಯಕರವಾದ ಆಹಾರ, ಜ್ಯೂಸ್ ಮೊದಲಾದವುಗಳ ಸೇವನೆ ಖಂಡಿತವಾಗಿಯೂ ನಿಮ್ಮ ಕೂದಲನ್ನು ದಟ್ಟವಾಗಿಯೂ, ಸದೃಢವಾಗಿಯೂ ಇಡಬಲ್ಲದು.

ದೇಹದ ಹೈಡ್ರೇಶನ್ ಗಾಗಲಿ ಅಥವಾ ನಮ್ಮ ದೈನಂದಿನ ಪೋಷಕಾಂಶಗಳನ್ನು ಪಡೆಯುವುದಕ್ಕಾಗಲಿ, ಹಣ್ಣು ಮತ್ತು ತರಕಾರಿ ರಸಗಳು ಆರೋಗ್ಯಕರ ದೇಹಕ್ಕೆ ಅತ್ಯಂತ ಮುಖ್ಯ. ಆಶ್ಚರ್ಯಕರ ಸಂಗತಿಯೆಂದರೆ, ಜ್ಯೂಸ್ ಕುಡಿಯುವುದರಿಂದ ನೀವು ಕೇವಲ ಕನಸು ಕಾಣುವಂತಹ ಹೊಳಪುಳ್ಳ, ಸುಂದರವಾದ ಕೂದಲನ್ನು ಪಡೆಯಲು ಸಾಧ್ಯ! ಆಸಕ್ತಿದಾಯಕವಾಗಿ ಕಾಣುತ್ತಿದೆ ಅಲ್ಲವೇ? ಹಾಗಾದರೆ, ಕೂದಲಿನ ಬೆಳವಣಿಗೆಗೆ ಸಹಾಯಕವಾದ ಕೆಲವು ಅತ್ಯುತ್ತಮ ಜ್ಯೂಸ್ ಗಳನ್ನು ಮತ್ತು ಅವುಗಳನ್ನು ತಯಾರಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಆದರೆ ಅದಕ್ಕೂ ಮೊದಲು, ಈ ಜ್ಯೂಸ್ ಗಳು ಮತ್ತು ಆರೋಗ್ಯಕರ ಕೂದಲಿನ ನಡುವಿನ ಸಂಬಂಧವೇನು ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳೋಣ! ದೇಹದ ಉಳಿದ ಭಾಗಗಳಂತೆಯೇ, ನಮ್ಮ ತಲೆಗೆ ಕೂಡ ಇಂತಿಷ್ಟೇ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿರುತ್ತದೆ, ಅದಿಲ್ಲದೇ ನೀವು ಕೂದಲು ತೆಳುವಾಗುವುದು ಅಥವಾ ಕೂದಲು ಉದುರುವುದು ಈ ಸಮಸ್ಯೆಗಳನ್ನು ಅನುಭವಿಸಬಹುದು. ದಿನಕ್ಕೆ ಕನಿಷ್ಠ ಒಂದು ಲೋಟ ರಸವನ್ನು ಸೇವಿಸುವುದರಿಂದ ಕಬ್ಬಿಣ, ವಿಟಮಿನ್ ಸಿ, ಸತು, ಬಿ-ಕಾಂಪ್ಲೆಕ್ಸ್ ವಿಟಮಿನ್ ಮತ್ತು ಇತರ ಅಮೈನೋ ಆಮ್ಲಗಳಂತಹ ಪ್ರಮುಖ ಪೋಷಕಾಂಶಗಳ ಕೊರತೆಯನ್ನು ತಡೆಯಬಹುದು, ಇದು ಬಲವಾದ, ಹೊಳೆಯುವ ಕೂದಲಿಗೆ ನಿರ್ಣಾಯಕವಾಗಿದೆ.

ಆಲೂಗಡ್ಡೆ ರಸವು ನಿಮ್ಮ ಕೂದಲಿಗೆ ಬೆರಗುಗೊಳಿಸುವಂಥ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಕಬ್ಬಿಣ, ವಿಟಮಿನ್ ಸಿ, ಸತು, ಬೀಟಾ ಕ್ಯಾರೋಟಿನ್ ಮತ್ತು ರಂಜಕದ ಸಮೃದ್ಧ ಮೂಲವಾಗಿರುವ ಆಲೂಗಡ್ಡೆಯ ಈ ಕಚ್ಚಾ ರಸವು ನಿಮ್ಮ ನೆತ್ತಿಯ ಕೋಶಗಳನ್ನು ಪೋಷಿಸುತ್ತದೆ ಮತ್ತು ಅವುಗಳ ಆರೋಗ್ಯವನ್ನು ಕಾಪಾಡುತ್ತದೆ. ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ, ಆಲೂಗಡ್ಡೆ ರಸವು, ಕೂದಲು ಉದುರುವಿಕೆಗೆ ಕಾರಣವಾದ ತಲೆಹೊಟ್ಟು ಮುಂತಾದ ತುರಿಕೆ ಪರಿಸ್ಥಿತಿಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆ ನೀಡುತ್ತದೆ. ಇದು ನಿಮ್ಮ ಹಾನಿಗೊಳಗಾದ ಕೂದಲಿನ ಎಳೆಗಳನ್ನು ಸರಿಪಡಿಸುತ್ತದೆ ಮತ್ತು ನಯವಾದ, ಹೊಳಪುಳ್ಳ ಕೂದಲು ಪಡೆಯಲು ಕಾಲಜನ್ ರಚನೆಯನ್ನು ಪ್ರೋತ್ಸಾಹಿಸುತ್ತದೆ. ಈ ರಸದಿಂದ ನಿಮ್ಮ ನೆತ್ತಿಗೆ ಮಸಾಜ್ ಮಾಡುವುದರಿಂದ ಕಿರುಚೀಲಗಳಿಗೆ ರಕ್ತ ಪರಿಚಲನೆ ಸಿಗುತ್ತದೆ ಜೊತೆಗೆ ಅವುಗಳನ್ನು ಒಳಗಿನಿಂದ ಬಲಪಡಿಸುತ್ತದೆ.

ಆಲೂಗಡ್ಡೆ ಜ್ಯೂಸ್ ತಯಾರಿಸುವುದು ಹೇಗೆ:

ಸಿಪ್ಪೆ ಸುಲಿದು ಆಲೂಗಡ್ಡೆಯನ್ನು ತುಂಡುಗಳಾಗಿ ಕತ್ತರಿಸಿ.
ಅವುಗಳನ್ನು ಬ್ಲೆಂಡರ್ಗೆ ವರ್ಗಾಯಿಸಿ.
ಸ್ವಲ್ಪ ನೀರು ಸೇರಿಸಿ ಮತ್ತು ರಸವನ್ನು ಹೊರತೆಗೆಯುವವರೆಗೆ ಮಿಶ್ರಣ ಮಾಡಿ.
ಹೊರತೆಗೆದ ದ್ರವವನ್ನು ಎತ್ತರದ ಗಾಜಿನ ಪಾತ್ರೆಗೆ ವರ್ಗಾಯಿಸಿ.
ತಕ್ಷಣ ಬಳಸಿ.

ಆಮ್ಲ (ನೆಲ್ಲಿಕಾಯಿ) ಜ್ಯೂಸ್
ಆಮ್ಲ ಜ್ಯೂಸ್ ನಿಮ್ಮ ಕೂದಲಿಗೆ ಮ್ಯಾಜಿಕ್ ಮದ್ದಿನಂತೆ ಕೆಲಸ ಮಾಡುತ್ತದೆ. ಇದು ಕೂದಲು ಮತ್ತು ನೆತ್ತಿಯ ಸಮಗ್ರ ಆರೈಕೆ ಪರಿಹಾರವನ್ನು ಒದಗಿಸುವ ನಂಬಲಾಗದ ಒಂದು ಅತ್ಯುತ್ತಮ ರಸ. ಭಾರತೀಯ ನೆಲ್ಲಿಕಾಯಿ ರಸದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ಇದು ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿದ್ದು ಅದು ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತದೆ. ಜೀವಕೋಶದ ಹಾನಿಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ, ನೆಲ್ಲಿಕಾಯಿ ರಸವು ಕೂದಲು ಉದುರುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ (1). ಇದು ಕೂದಲಿನ ಅಕಾಲಿಕ ಬಿಳಿಬಣ್ಣವನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮ ನೀಳ ಕೂದಲಿನ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ. ಈ ರಸದಲ್ಲಿರುವ ಸೂಕ್ಷ್ಮಜೀವಿ ವಿರೋಧಕ ಗುಣಲಕ್ಷಣಗಳು ನಿಮ್ಮ ಕೂದಲನ್ನು ಹಾನಿಗೊಳಿಸುವ ತಲೆಹೊಟ್ಟು ಮತ್ತು ಯೀಸ್ಟ್ ಸೋಂಕುಗಳನ್ನು ಎದುರಿಸುತ್ತವೆ. ಕೂದಲಿಗೆ ರಕ್ಷಣೆಯನ್ನು ನೀಡುತ್ತದೆ.

ಕ್ಯಾರೆಟ್ ಜ್ಯೂಸ್
ಕ್ಯಾರೆಟ್ ಜ್ಯೂಸ್ ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುವ ಅನೇಕ ಪ್ರಮುಖ ಪೋಷಕಾಂಶಗಳ ಉಗ್ರಾಣವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದು ಕ್ಯಾರೊಟಿನಾಯ್ಡ್ ಗಳು ಎಂದು ಕರೆಯಲ್ಪಡುವ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ನಿಮ್ಮ ನೆತ್ತಿಯ ಕೋಶಗಳ ಆಕ್ಸಿಡೇಟಿವ್ (ಉತ್ಕರ್ಷಣಶೀಲ) ಹಾನಿಯನ್ನು ಕಡಿಮೆ ಮಾಡುತ್ತದೆ. ಒಂದು ರೀತಿಯ ಉತ್ಕರ್ಷಣ ನಿರೋಧಕವಾದ ಬೆಟಕಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ವಿಟಮಿನ್, ಶುಷ್ಕ ಮತ್ತು ಹಾನಿಗೊಳಗಾದ ಕೂದಲಿನ ಎಳೆಗಳನ್ನು ಸರಿಪಡಿಸುವ ಮೂಲಕ ಕೂದಲು ಉದುರುವಿಕೆಯನ್ನು ನಿಭಾಯಿಸುತ್ತದೆ. ನಿಮ್ಮ ಕೂದಲನ್ನು ಹೈಡ್ರೇಟ್ ಮಾಡಲು ಮತ್ತು ಮೃದುವಾಗಿ ಮತ್ತು ಆರೋಗ್ಯಕರವಾಗಿಡಲು ನೆತ್ತಿಯ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಇದು ಪ್ರೋತ್ಸಾಹಿಸುತ್ತದೆ. ಕೂದಲು ಉದುರುವುದು ಮತ್ತು ಕೂದಲು ತೆಳುವಾಗುವುದನ್ನು ಎದುರಿಸಲು ಕೆರಾಟಿನ್ ರಚನೆಯನ್ನು ಉತ್ತೇಜಿಸುವ ಬಯೋಟಿನ್ ನ ಪ್ರಮುಖ ಮೂಲವಾಗಿದೆ ಕ್ಯಾರೆಟ್ ರಸ.

ಕಿತ್ತಳೆ ರಸ ಕಿತ್ತಳೆ ಒಂದು ಅತ್ಯುತ್ತಮ ಹಣ್ಣು ಮತ್ತು ಉತ್ತಮ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ! ಅವುಗಳು ವಿಟಮಿನ್ ಸಿ ಯ ಹೆಚ್ಚಿನ ಶೇಕಡಾವಾರು ಪ್ರಮಾಣವನ್ನು ಹೊಂದಿರುತ್ತವೆ, ಇದು ನಿಮ್ಮ ಕೂದಲಿನ ಕೋಶಗಳನ್ನು ಹಾನಿಗೊಳಿಸುವ ಸ್ವತಂತ್ರ ರಾಡಿಕಲ್ (ಆಮುಲಾಗ್ರಗಳು) ಳೊಂದಿಗೆ ಹೋರಾಡುತ್ತದೆ. ಅಷ್ಟೆ ಅಲ್ಲ! ಕಿತ್ತಳೆ ಹಣ್ಣಿನ ರಸವು ಬಯೋಫ್ಲವೊನೈಡ್ ಸಮೃದ್ಧವಾಗಿದೆ, ಇದು ಚೆನ್ನಾಗಿ ರಕ್ತ ಪರಿಚಲನೆಯನ್ನು ಉತ್ತೇಜಿಸುವ ಮೂಲಕ ಕೂದಲಿನ ಬೇರುಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ. ಪ್ರತಿದಿನ ಕಿತ್ತಳೆ ರಸವನ್ನು ಕುಡಿಯುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಅಲ್ಲದೇ ನೆತ್ತಿಯ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾವನ್ನು ಆಕ್ರಮಿಸುವಂತಹ ಸೋಂಕನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ತಡೆಯಬಹುದು.

Leave A Reply

Your email address will not be published.