EBM News Kannada
Leading News Portal in Kannada

ಯುರೋಪ್ ನಲ್ಲಿ ಹಕ್ಕಿಜ್ವರ ಉಲ್ಬಣ | Bird flu outbreak in Europe

0



ಪ್ಯಾರಿಸ್: ಹಕ್ಕಿಜ್ವರ ಸೋಂಕು ಯುರೋಪ್ನಾದ್ಯಂತ ಉಲ್ಬಣಿಸಿರುವಂತೆಯೇ ದೇಶದ ವಾಯವ್ಯದಲ್ಲಿರುವ ಕೋಳಿ ಫಾರಂನಲ್ಲಿ ಹೆಚ್ಚು ರೋಗಕಾರಕ ಹಕ್ಕಿಜ್ವರ ವೈರಸ್ ಹರಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಫ್ರಾನ್ಸ್ನ ಕೃಷಿ ಸಚಿವಾಲಯ ಮಂಗಳವಾರ ಹೇಳಿದೆ.

ವಾಯವ್ಯದ ಬ್ರಿಟಾನಿ ಪ್ರಾಂತದ ಕೋಳಿಫಾರಂನಲ್ಲಿ ಹಕ್ಕಿಜ್ವರದ ಸೋಂಕು ಹರಡಿರುವುದನ್ನು ಗಮನಿಸಿ ಹಕ್ಕಿಜ್ವರದ ಎಚ್ಚರಿಕೆಯ ಮಟ್ಟವನ್ನು ನಗಣ್ಯ(ಅತ್ಯಲ್ಪ)ದಿಂದ ಮಧ್ಯಮಕ್ಕೆ ಏರಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಕಳೆದ ವರ್ಷಗಳಲ್ಲಿ ಹಕ್ಕಿಜ್ವರದ ಕಾರಣ ಲಕ್ಷಾಂತರ ಪಕ್ಷಿಗಳನ್ನು ಹತ್ಯೆ ಮಾಡಲಾಗಿದ್ದು ಸಾಮಾನ್ಯವಾಗಿ ಶರತ್ಕಾಲ ಮತ್ತು ಚಳಿಗಾಲದಲ್ಲಿ ಯುರೋಪ್ಗೆ ಆಘಾತ ನೀಡುತ್ತದೆ. ಜರ್ಮನಿ, ನೆದರಲ್ಯಾಂಡ್, ಇಟಲಿ, ಕ್ರೊಯೇಷಿಯಾ ಮತ್ತು ಹಂಗರಿ ಸೇರಿದಂತೆ ಹಲವು ದೇಶಗಳ ಕೋಳಿಫಾರಂಗಳಲ್ಲಿ ಪತ್ತೆಯಾಗಿದೆ.

Leave A Reply

Your email address will not be published.