EBM News Kannada
Leading News Portal in Kannada

ಬೆಂಗಳೂರು: ಮತಗಟ್ಟೆ, ಅಭ್ಯರ್ಥಿಗಳ ವಿವರವಿರುವ ’ಚುನಾವಣಾ’ ಆ್ಯಪ್‌ ಬಿಡುಗಡೆ

0
ಬೆಂಗಳೂರು: ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ? ನಿಮ್ಮ ವಾರ್ಡ್ ನಲ್ಲಿ ಮತಗಟ್ಟೆ ಎಲ್ಲಿದೆ? ಯಾವ ಅಭ್ಯರ್ಥಿಗಳು ಯಾವ ಪಕ್ಷದಿಂದ ಸ್ಪರ್ಧೆ ನೀಡುತ್ತಿದ್ದಾರೆ? ಇದೇ ಮೊದಲಾದ ಅನೇಕ ಸಂದೇಹಗಳಿಗೆ ಈಗ ನಿಮ್ಮ ಬೆರಳ ತುದಿಯಲ್ಲೇ ಉತ್ತರ ದೊರಕಲಿದೆ,
ಮತದಾರರಿಗೆ ಅಗತ್ಯವಾಗಿರುವ ಎಲ್ಲಾ ಮಾಹಿತಿ ಒಳಗೊಂಡ ‘ಚುನಾವಣಾ’  ಆಂಡ್ರಾಯ್ಡ್ ಆ್ಯಪ್‌ ಇದೀಗ ಬಿಡುಗಡೆಯಾಗಿದೆ.  ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಬುಧವಾರದಂದು ಈ ಆ್ಯಪ್‌ ಬಿಡುಗಡೆ ಮಾಡಿದ್ದಾರೆ.
“ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಇಂತಹಾ ಜನಸ್ನೇಹಿ ಆ್ಯಪ್‌ ಬಿಡುಗಡೆಗೊಳ್ಳುತ್ತಿದೆ. ಪ್ರತಿ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಇಳಿಮುಖವಾಗುತ್ತಿದ್ದು ಇದಕ್ಕೆ ಕಾರಣ ಅವಲೋಕಿಸಿದಾಗ ಅನೇಕ ಅಂಶಗಳು ತಿಳಿದು ಬಂಣ್ದಿದೆ. ಬಹುತೇಕ ಕಾಲು ಬಾಗದ ಮತದಾರರಿಗೆ ಮತದಾನ ವಿಚಾರವಾಗಿ ಪ್ರಾಥಮಿಕ ಮಾಹಿತಿಯ ಕೊರತೆ ಇದೆ. ಇಂತಹಾ ಮಾಹಿತಿ ಕೊರತೆಯ ಕಾರಣ ಅವರು ಮತ ಚಲಾವಣೆಯಿಂದ ದೂರ್ ಉಳಿದಿದ್ದರು
“ಇದೀಗ ಆ್ಯಪ್‌ ಅಭಿವೃದ್ದಿಪಡಿಸಲಾಗಿದ್ದು ಇದರಲ್ಲಿ ಮತಗಟ್ಟೆ ವಿವರಗಳು, ಅಭ್ಯರ್ಥಿಯ ವಿವರ, ಪಕ್ಷ, ಗುರುತು ಇದೇ ಮೊದಲಾದ ಎಲ್ಲಾ ವಿವರಗಳಿದೆ”ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ ಹೇಳಿದರು.
ಎಪಿಕ್ ಸಂಖ್ಯೆಯನ್ನು ಬಳಸಿ ನಿಮ್ಮ ಅಗತ್ಯದ ಎಲ್ಲಾ ಮಾಹಿತಿಯನ್ನು ಈ ಆ್ಯಪ್‌ ನಿಂದ ಪಡೆಯಬಹುದಾಗಿದೆ. ಅಂಗವಿಕಲರಿಗಾಗಿ ಗಾಲಿ ಕುರ್ಚಿಯನ್ನೂ ಸಹ ಕಾಯ್ದಿರಿಸಬಹುದು.
ಆ್ಯಪ್‌ ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇಗೆ ತೆರಳಿ Chunavana KSRSAC KGIS ಸರ್ಚ್ ಮಾಡಿರಿ.
Leave A Reply

Your email address will not be published.