EBM News Kannada
Leading News Portal in Kannada

ಟ್ವಿಟರ್’ನಲ್ಲಿ ದೋಷ ಪತ್ತೆ: ಪಾಸ್’ವರ್ಡ್ ಬದಲಿಸುವಂತೆ ಬಳಕೆದಾರಿಗೆ ಟ್ವಿಟರ್ ಮನವಿ

0
ಸ್ಯಾನ್ ಫ್ರಾನ್ಸಿಸ್ಕೋ: ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್’ವರ್ಡ್’ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ.
ಟ್ವಿಟರ್ ನಲ್ಲಿ ದೋಷವೊಂದು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸೇವೆ ಹಾಗೂ ವೇದಿಕೆಗಳಲ್ಲಿ ಒಂದೇ ರೀತಿಯ ಪಾಸ್ ವರ್ಡ್ ಗಳನ್ನು ಬಳಕೆ ಮಾಡುತ್ತಿರುವ ಬಳಕೆದಾರರೂ ಕೂಡಲೇ ತಮ್ಮ ಪಾಸ್ ವರ್ಡ್ ಗಳನ್ನು ಬದಲಿಸುವಂತೆ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ.
ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿಲ್ಲ. ಯಾವುದೇ ರೀತಿಯ ನಿಯಮಗಳೂ ಉಲ್ಲಂಘನೆಯಾಗಿಲ್ಲ. ಪ್ರಸ್ತುತ ಎದುರಾಗಿರುವ ದೋಷವನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತದೆ ಎಂದು ಟ್ವಿಟರ್ ಹೇಳಿಕೊಂಡಿದೆ.
ಟ್ವಿಟರ್ ನಲ್ಲಿ ಈಗಷ್ಟೇ ದೇಶವೊಂದನ್ನು ಕಂಡು ಹಿಡಿಯಲಾಗಿದೆ. ಸೇವ್ ಮಾಡಲಾಗಿರುವ ಪಾಸ್’ವರ್ಡ್ ಗಳಲ್ಲಿ ದೋಷಗಳು ಕಂಡು ಬರುತ್ತಿವೆ. ಹೀಗಾಗಿ ಸಮಸ್ಯೆಯನ್ನು ಇದೀಗ ಪರಿಹರಿಸಲಾಗಿದ್ದು, ತನಿಖೆ ವೇಳೆ ಬಳಕೆದಾರರ ಯಾವುದೊಂದು ಮಾಹಿತಿಯ ಸೋರಿಕೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಟ್ವಿಟರ್ ನಲ್ಲಿ ಬಳಕೆ ಮಾಡುತ್ತಿರುವ ಪಾಸ್ ವರ್ಡ್ ಗಳನ್ನು ಇತರೆ ಸಾಮಾಜಿಕ ಜಾಲತಾಣಗಳು ಹಾಗೂ ಸೇವೆಗಳಿಗೆ ಬಳಕೆ ಮಾಡುತ್ತಿದ್ದರೆ, ಅವುಗಳನ್ನು ಬದಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಟ್ವಿಟರ್ ಹೇಳಿಕೊಂಡಿದೆ.
ಟ್ವಿಟರ್ ನಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಬಳಕೆದಾರರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಟ್ವಿಟರ್ ಮುಖ್ಯ ತಾಂತ್ರಿಕ ಅಧಿಕಾರಿ ಪರಗ್ ಅಗ್ರವಾಪ್ ಅವರು ಹೇಳಿದ್ದಾರೆ.
Leave A Reply

Your email address will not be published.