EBM News Kannada
Leading News Portal in Kannada

Breaking News Today Live:ಇಂದು ರಾತ್ರಿ ಸ್ಪಂದನಾ ವಿಜಯ್​ ಪಾರ್ಥಿವ ಶರೀರ ಬೆಂಗಳೂರಿಗೆ – Kannada News | Karnataka Breaking Kannada News Live Updates on Parliament No Confidence Motion, Spandana Vijay Funeral

0


Kiran Hanumant Madar |

Updated on:Aug 08, 2023 | 7:51 AM


Karnataka Breaking Kannada News Live Updates: ರಾಜ್ಯ ರಾಜಕೀಯ, ಅಪರಾಧ, ಮಳೆ, ಹವಾಮಾನ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಲೇಟೆಸ್ಟ್​​ ಅಪ್ಡೇಟ್ಸ್​​ ಇದೀಗ ಟಿವಿ9 ಡಿಜಿಟಲ್​​ ಕನ್ನಡದಲ್ಲಿ….

ಸ್ಪಂದನಾ

LIVE NEWS & UPDATES

  • 08 Aug 2023 07:43 AM (IST)

    Breaking News Today Live: ಥೈಲ್ಯಾಂಡ್‌ನಿಂದ ಇಂದು ಸಂಜೆ ವಿಮಾನದಲ್ಲಿ ಸ್ಪಂದನಾ ಮೃತದೇಹ ರವಾನೆ

    ಬೆಂಗಳೂರು: ಥಾಯ್ಲೆಂಡ್​ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ಥೈಲ್ಯಾಂಡ್‌ನಿಂದ ಇಂದು ಸಂಜೆ 7 ಗಂಟೆಗೆ ವಿಮಾನದಲ್ಲಿ ರವಾನೆ ಆಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್‌ ತಲುಪಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ನಿರೀಕ್ಷೆಗೂ ಮೀರಿದ ಬಹುಮತ ಪಡೆಯುವ ಮೂಲಕ ಗೆದ್ದು ಬೀಗಿ, ಅಧಿಕಾರದ ಗದ್ದುಗೆಯನ್ನು ಏರಿ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದೆ. ಸರ್ಕಾರ ರಚನೆಯಾಗಿ ಈಗ ಎರಡು ತಿಂಗಳು ಕಳೆದಿದ್ದು, ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಅಸಮಾಧಾನ ಹೊರ ಹಾಕಿದ್ದರು. ಇದನ್ನು ಶಮನ ಮಾಡಲು ಸಿಎಂ ಮತ್ತು ಡಿಸಿಎಂ ಇಂದು ಜಿಲ್ಲಾವಾರು ಶಾಸಕರ ಮತ್ತು ಸಚಿವರ ಸಭೆ ಕರೆದಿದ್ದು, ಇಂದು ಬೆಳಗ್ಗೆ ರಾಯಚೂರು, ವಿಜಯಪುರ, ಕೊಪ್ಪಳ ಜಿಲ್ಲೆಗಳ ಹಾಗೂ ಸಂಜೆ ಬೆಳಗಾವಿ, ಹಾವೇರಿ, ಕಲಬುರಗಿ ಜಿಲ್ಲೆಗಳ ಶಾಸಕರು ಸೇರಿ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನು ನಿನ್ನೆ ಹೃದಯಾಘಾತದಿಂದ ವಿಜಯ್ ​ರಾಘವೇಂದ್ರ ಪತ್ನಿ ಸ್ಪಂದನಾ ಅವರು ನಿಧನರಾಗಿದ್ದು, ಇಂದು ಸಂಜೆ 7 ಗಂಟೆಗೆ ಥೈಲ್ಯಾಂಡ್‌ನಿಂದ ವಿಮಾನದಲ್ಲಿ ಮೃತದೇಹ ರವಾನೆಯಾಗಲಿದೆ. ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ಗ್ರಾ. ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್‌ ತಲುಪಲಿದೆ. ಇನ್ನು ಬಿಜೆಪಿ ಪಾಳಯದಲ್ಲಿ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಕಂಗ್ಗಂಟಾಗಿದೆ. ಇದರೊಂದಿಗೆ ಇಂದಿನ ಅಪರಾಧ, ಮಳೆ ಕುರಿತು ಲೇಟೆಸ್ಟ್​​ ಅಪ್ಡೇಟ್ಸ್​​ ಇಲ್ಲಿದೆ.

Published On – Aug 08,2023 7:39 AM

Leave A Reply

Your email address will not be published.