EBM News Kannada
Leading News Portal in Kannada

ಪ್ರಧಾನಿ ಘೋಷಣೆಗೆ ಮುನ್ನವೇ ಲಾಕ್​​ಡೌನ್​​ ವಿಸ್ತರಿಸಿದ ಪಂಜಾಬ್​​ ಸಿಎಂ: ಮೇ 3ರ ಬಳಿಕ 2 ವಾರ ನಿಷೇಧಾಜ್ಞೆ

0

ನವದೆಹಲಿ(ಏ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಣೆ ಮಾಡುವ ಮುನ್ನವೇ ಮೇ 3ರ ನಂತರ ಮತ್ತೆ ಎರಡು ವಾರಗಳ ಕಾಲ ಲಾಕ್​​ಡೌನ್ ವಿಸ್ತರಣೆ ಮಾಡಿ ಪಂಜಾಬ್​​​ ಮುಖ್ಯಮಂತ್ರಿ ಅಮರೀಂದರ್​​ ಸಿಂಗ್​​​​ ಪ್ರಕಟಿಸಿದ್ಧಾರೆ. ಮೇ 3ರ ನಂತರ 2 ವಾರಗಳವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದಿರುವ ಅಮರೀಂದರ್​ ಸಿಂಗ್​​, ಕೆಲವು ನಿಷೇಧಾಜ್ಞೆ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

ಇನ್ನು, ಬೆಳಿಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ ನಿಷೇಧಾಜ್ಞೆ ಸಡಿಲಿಕೆ ಮಾಡಿರುವ ಪಂಜಾಬ್​​ ಸಿಎಂ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಅವಕಾಶ ಮಾಡಿಕೊಡಲಿದ್ದಾರೆ. ಅಗತ್ಯ ವಸ್ತಗಳನ್ನು ಜನರು ಖರೀದಿ ಮಾಡೋಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಕೊರೋನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯ ಎಂದಿದ್ದಾರೆ.

ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಡಲು ಎರಡನೇ ಅವಧಿಗೆ ಮೇ 3ನೇ ತಾರೀಕಿನವರೆಗೂ ಜಾರಿ ಮಾಡಲಾಗಿದ್ದ 21 ದಿನಗಳ ಲಾಕ್​​ಡೌನ್​ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

Leave A Reply

Your email address will not be published.