EBM News Kannada
Leading News Portal in Kannada

Aero India 2021: ಬೆಂಗಳೂರಿನಲ್ಲೇ ‘ಏರೋ ಇಂಡಿಯಾ 2021’: ಫೆ.3ರಿಂದ 7ರವರೆಗೂ ಐದು ದಿನ ವೈಮಾನಿಕ ಪ್ರದರ್ಶನ – ಕೇಂದ್ರ

0

ಬೆಂಗಳೂರು(ಏ.29): ದೇಶಾದ್ಯಂತ ಮಾರಕ ಕೊರೋನಾ ವೈರಸ್​​ ಅಟ್ಟಹಾಸ ಮೆರೆಯುತ್ತಿರುವ ಹೊತ್ತಲ್ಲೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಮುಂದಿನ ಆವೃತ್ತಿಗೆ ದಿನಾಂಕ ಘೋಷಣೆಯಾಗಿದೆ. ಭಾರತದ ಮಿಲಿಟರಿ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತೀದೊಡ್ಡ ಪ್ರತಿಷ್ಠಿತ ಈ ‘ಏರೋ ಇಂಡಿಯಾ 2021’ ಶೋ ಈ ಬಾರಿಯೂ ಯಲಹಂಕ ವಾಯುನೆಲೆಯಲ್ಲೇ ನಡೆಯಲಿದೆ. ಮುಂದಿನ ವರ್ಷ ಅಂದರೇ ಫೆ.3ರಿಂದ 7ರವರೆಗೂ ಐದು ದಿನಗಳ ಕಾಲ ಏರೋ ಇಂಡಿಯಾ ಶೋ ನಡೆಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ದಿನಾಂಕ ಪ್ರಕಟಿಸಿದೆ.

ಈ ಹಿಂದೆ ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆದಿದ್ದ ಏರೋ ಇಂಡಿಯಾ 2019 ಶೋ ಸಿಹಿ-ಕಹಿ ನೆನಪುಗಳೊಂದಿದೆ ಅಂತ್ಯ ಕಂಡಿತ್ತು. ಎರಡು ವರ್ಷದ ಹಿಂದೆ 2019ರಲ್ಲಿ ಫೆ.20ರಿಂದ 24ರವರೆಗೆ ನಡೆದ ಏರೋ ಇಂಡಿಯಾ ಶೋ ಎರಡು ದುರ್ಘಟನೆಗಳಿಗೆ ಸಾಕ್ಷಿಯಾಯಿತು.

ಇದಾದ ನಂತರದಲ್ಲಿ 2021ರ ಏರೋ ಇಂಡಿಯಾ ಎಲ್ಲಿ ನಡೆಯಲಿದೆ ಎನ್ನುವ ಅನುಮಾನ ಎಲ್ಲರಲ್ಲಿ ಮೂಡಿತ್ತು. ಮುಂದಿನ ಬಾರಿಯೂ ಬೆಂಗಳೂರಲ್ಲೇ ಏರೋ ಇಂಡಿಯಾ ಶೋ ಮಾಡಿ ಎಂದು ಅಂದಿನ ಮುಖ್ಯಮಂತ್ರಿ ಎಚ್​​ಡಿ ಕುಮಾರಸ್ವಾಮಿ ಕೇಂದ್ರ ರಕ್ಷಣೆ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್​​ ಬಳಿ ಮನವಿ ಮಾಡಿಕೊಂಡಿದ್ದರು.

Leave A Reply

Your email address will not be published.