EBM News Kannada
Leading News Portal in Kannada

ಕೊರೋನಾ ಲಾಕ್​ಡೌನ್ ಪರಿಣಾಮ; ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ!

0

ನವದೆಹಲಿ: ಕೊರೋನಾ ವೈರಸ್​ ಹರಡುವಿಕೆ ತಡೆಗಟ್ಟಲು ಸಲುವಾಗಿ ಕಳೆದ 20 ದಿನಗಳಿಂದ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ ದೇಶದ ಎಲ್ಲ ಕೈಗಾರಿಕೆಗಳು ಸ್ಥಗಿತಗೊಂಡಿದ್ದು, ಜನರು ಮನೆಯಲ್ಲಿ ಉಳಿದಿದ್ದಾರೆ. ಲಾಕ್​ಡೌನ್​ನಿಂದ ಕೈಗಾರಿಕೆಗಳ ಸ್ಥಗಿತದಿಂದಾಗಿ ವಾರಣಾಸಿ ಮತ್ತು ಹರಿದ್ವಾರದ ಮೂಲಕ ಹರಿಯುವ ಗಂಗಾ ನದಿ ನೀರಿನ ಗುಣಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ.

ಮಾರಕ ಸೋಂಕು ನಿಯಂತ್ರಣಕ್ಕಾಗಿ ಕಳೆದ ಮಾರ್ಚ್ 24ರಂದು ಪ್ರಧಾನಿ ಮೋದಿ ಅವರು ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಿದ್ದರು. ಅಲ್ಲಿಯವರೆಗೂ ನಿರಂತರವಾಗಿ ಗಂಗೆಗೆ ರಾಸಾಯನಿಕ, ಮಾಲಿನ್ಯಕಾರಕಗಳನ್ನು ಬಿಡುತ್ತಿದ್ದ ಕಾರ್ಖಾನೆಗಳು ತನ್ನ ಕಾರ್ಯ ಚಟುವಟಿಕೆ ಬಂದ್​ ಮಾಡಿದ್ದವು.

ಲಾಕ್​ಡೌನ್​ ಬಳಿಕ ಗಂಗಾ ನದಿಯ ನೀರಿನ ಗುಣಮಟ್ಟ ಗಣನೀಯವಾಗಿ ವರ್ಧಿಸಿದೆ. ಇದೀಗ ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಲಾಕ್​ಡೌನ್​ನಿಂದಾಗಿ ಹರಿದ್ವಾರದ ಘಟ್ಟಗಳು ಸಹ ಜನರು ಹಾಗೂ ವಾಹನಗಳ ಓಡಾಟದಿಂದ ಮುಕ್ತವಾಗಿದೆ. ಜನರು ನೀರಿನಲ್ಲಿ ಕಸ, ತ್ಯಾಜ್ಯವನ್ನು ಎಸೆಯದಿರುವ ಪರಿಣಾಮ ನೀರು ಹೆಚ್ಚು ಶುಭ್ರವಾಗಿದೆ. ಈಗ ನೀರಿನಲ್ಲಿ ಮೀನು ಮತ್ತು ಇತರ ಜಲಚರಗಳ ಓಡಾಟವನ್ನು ಸಹ ಕಾಣುವಷ್ಟು ಗಂಗೆಯ ನೀರು ಪಾರದರ್ಶಕವಾಗಿ, ಪರಿಶುದ್ಧವಾಗಿದೆ ಎಂದು ಎಎನ್​ಐ ವರದಿ ಮಾಡಿದೆ.

ಕೈಗಾರಿಕೆಗಳು, ಹೋಟೆಲ್​ ಮತ್ತು ಇತರೆ ಮೂಲಗಳಿಂದ ಗಂಗೆ ಭಾಗಶಃ ಮಲಿನಗೊಳ್ಳುತ್ತಿದ್ದಳು. ಈಗ ಅವೆಲ್ಲವೂ ಬಂದ್​ ಆಗಿರುವುದರಿಂದ ಗಂಗೆ ನೀರಿನ ಗುಣಮಟ್ಟ ಶೇ.40ರಿಂದ 50 ರಷ್ಟು ಗುಣಮಟ್ಟ ವೃದ್ಧಿಸಿದೆ ಎಂದು ಐಐಟಿ-ಬಿಎಚ್​ಯು ಪ್ರಾಧ್ಯಾಪಕರು ಎಎನ್​ಐಗೆ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಈ ಭಾಗದಲ್ಲಿ ಕಳೆದ ಕೆಲವು ವಾರಗಳಲ್ಲಿ ಅತ್ಯುತ್ತಮ ಮಳೆಯಾಗಿರುವುದರಿಂದಲೂ ನೀರಿನ ಗುಣಮಟ್ಟ ಹೆಚ್ಚಳವಾಗಲು ಕಾರಣವಾಗಿದೆ.

ಕೇವಲ ಗಂಗಾ ಮಾತ್ರವಲ್ಲ, ಯುಮುನಾ ನದಿ ನೀರಿನ ಗುಣಮಟ್ಟ, ಪ್ರಮಾಣದಲ್ಲೂ ಗಮನೀಯವಾಗಿ ಹೆಚ್ಚಳವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಸ್​ ಆದ ನದಿಗಳ ಚಿತ್ರವನ್ನು ನೀವು ನೋಡಿರಬಹುದು. ಹಲವು ವರ್ಷಗಳಿಂದ ಮಾಲಿನ್ಯದಿಂದ ಬಳಲುತ್ತಿದ್ದ ನದಿಗಳು ಈಗ ಪರಿಶುದ್ಧವಾಗಿವೆ.

Leave A Reply

Your email address will not be published.