EBM News Kannada
Leading News Portal in Kannada

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಅಮೆರಿಕಾ ಹೊಸ ‘ಅಸ್ತ್ರ’

0

ವಾಶಿಂಗ್ ಟನ್, ಏಪ್ರಿಲ್.02: ಕೊರೊನಾ ವೈರಸ್ ವಿರುದ್ಧ ಹೋರಾಡುವುದಕ್ಕೆ ದೊಡ್ಡ ದೊಡ್ಡ ರಾಷ್ಟ್ರಗಳ ಹೆಣಗಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಯುನೈಟೆಡ್ ಸ್ಟೇಟ್ಸ್ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರವಾಗಿದೆ. 2,15,344ಕ್ಕೂ ಅಧಿಕ ಮಂದಿ ಸೋಂಕಿತರನ್ನು ಹೊಂದಿರುವ ಅಮೆರಿಕಾದಲ್ಲಿ ಇದುವರೆಗೂ ಮಾರಕ ರೋಗಕ್ಕೆ 5,112ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಸೂಚನೆ ನೀಡಿದ್ದಾರೆ.

ಕೊರೊನಾ ವೈರಸ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ದೇಶದಲ್ಲಿ ಇರುವ ಪ್ರತಿಯೊಬ್ಬರನ್ನು ಮಾಸ್ಕ್ ಹೊರತಾಗಿ ಸಾಮಾನ್ಯ ಬಟ್ಟೆಯನ್ನಾದರೂ ಮುಖಕ್ಕೆ ಕಟ್ಟಿಕೊಳ್ಳುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ(CDC) ಕೇಂದ್ರವು ತಿಳಿಸಿದೆ.

ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎಷ್ಟಾಗಿದೆ ಎಂದರೆ ಎಲ್ಲ ಸೋಂಕಿತರಿಗೂ ಮಾಸ್ಕ್ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಾಸ್ಕ್ ಗಳ ಅಭಾವ ಕೊರೊನಾ ಹರಡುವಿಕೆಗೆ ಕಾರಣವಾಗಬಾರದು ಈ ನಿಟ್ಟಿನಲ್ಲಿ ಅಮೆರಿಕಾ ಸರ್ಕಾರವು ಹೊಸ ಅಸ್ತ್ರವನ್ನು ಪ್ರಯೋಗಿಸಿದೆ.

ಕೊರೊನಾ ವೈರಸ್ ನಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಕನಿಷ್ಠ ಮಾಸ್ಕ್ ಧರಿಸದಿದ್ದರೂ ಕರವಸ್ತ್ರ ಅಥವಾ ಅಂಗವಸ್ತ್ರವನ್ನು ಮುಖಕ್ಕೆ ಕಟ್ಟಿಕೊಳ್ಳುವುದು ಸೂಕ್ತವಾಗಿದೆ. ಮನೆಗಳಿಂದ ಹೊರಗೆ ಬರುವಾಗ ಮುಖವನ್ನು ಬಟ್ಟೆಗಳಿಂದ ಮುಚ್ಚಿಕೊಂಡು ಬರುವಂತೆ ಜನರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕಾದಲ್ಲಿ ಸಾರ್ವಜನಿಕರಿಗಿಂತಲೂ ಕೊರೊನಾ ವೈರಸ್ ಸೋಂಕಿತರನ್ನು ತಪಾಸಣೆ ಮಾಡುವ ಮತ್ತು ಅಂಥವರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಕಡ್ಡಾಯವಾಗಿ ಬೇಕಾಗಿವೆ. ಆದರೆ ದೇಶದಲ್ಲಿ ಎನ್-95 ಮಾಸ್ಕ್ ಗಳಿಗೆ ಕೊರತೆಯಿದೆ. ಇದರಿಂದ ವೈದ್ಯಕೀಯ ಸಿಬ್ಬಂದಿ ಹಲವು ಬಾರಿ ತಾವು ಬಳಸಿದ ಮಾಸ್ಕ್ ಗಳನ್ನೇ ಮರುಬಳಕೆ ಮಾಡುತ್ತಿದ್ದಾರೆ.

Leave A Reply

Your email address will not be published.