EBM News Kannada
Leading News Portal in Kannada

ಭಾರತದ ವಿರುದ್ಧ ಐತಿಹಾಸಿಕ ಪಂದ್ಯ; ಅಫ್ಘಾನಿಸ್ತಾನಕ್ಕೆ ಪ್ರಧಾನಿ ಮೋದಿ ಅಭಿನಂದನೆ

0

ನವದೆಹಲಿ: ಇದೇ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಭಾರತದ ವಿರುದ್ಧ ಆಡುತ್ತಿರುವ ಅಫ್ಘಾನಿಸ್ತಾನ ರಾಷ್ಟ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು ಎರಡೂ ತಂಡಗಳಿಗೂ ಶುಭಾಶಯಗಳನ್ನು ಕೋರಿದ್ದಾರೆ.
ಭಾರತದ ವಿರುದ್ಧ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು. ಐತಿಹಾಸಿಕ ಪಂದ್ಯವನ್ನು ಆಡಲು ಭಾರತವನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಉಭಯ ತಂಡಗಳಿಗೂ ಶುಭಾಶಯಗಳು. ಕ್ರೀಡೆ ನಮ್ಮ ಜನರನ್ನು ಹತ್ತಿರ ತರಲಿ ಮತ್ತು ನಮ್ಮ ಬಾಂಧ್ಯವ್ಯವನ್ನು ಗಟ್ಟಿಗೊಳಿಸಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.

ಇದರಂತೆ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರೂ ಕೂಡ ಉಭಯ ತಂಡಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಅಫ್ಘಾನಿಸ್ತಾನ್ ರಾಷ್ಟ್ರೀಯ ಕ್ರಿಕೆಟ್ ತಂಡ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಟೆಸ್ ಪಂದ್ಯವನ್ನು ಆಡುತ್ತಿದೆ.

Leave A Reply

Your email address will not be published.