EBM News Kannada
Leading News Portal in Kannada

Raksha Bandhan 2023: ರಕ್ಷಾ ಬಂಧನ ಹಬ್ಬದ ನಿಖರವಾದ ದಿನಾಂಕ ಯಾವುದು? ರಕ್ಷೆ ಕಟ್ಟುವ ಶುಭ ಮುಹೂರ್ತ ಯಾವಾಗ? – Kannada News | Is Raksha Bandhan festival on August 30 or 31? Know the exact date and auspicious time of this special festival

0


ಈ ವರ್ಷ ರಕ್ಷಾ ಬಂಧನದ ದಿನದಂದು ಭದ್ರ ಕಾಲ ಮುಹೂರ್ತ ಇರುವುದರಿಂದ ರಕ್ಷಾಬಂಧನ ಹಬ್ಬ ಆಗಸ್ಟ್ 30 ಅಥವಾ 31 ರಂದೇ ಎಂಬ ಗೊಂದಲ ಅನೇಕರಲ್ಲಿದೆ. ಈ ಹಬ್ಬದ ನಿಖರವಾದ ದಿನಾಂಕ ಮತ್ತು ಶುಭ ಮುಹೂರ್ತದ ಬಗ್ಗೆ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷ ಮಹತ್ವವಿದೆ. ಬಹಳ ವಿಜೃಂಭಣೆಯಿಂದ ಆಚರಿಸುವ ಹಿಂದೂ ಹಬ್ಬಗಳಲ್ಲಿ ರಕ್ಷಾ ಬಂಧನವೂ ಒಂದು. ರಕ್ಷಾ ಬಂಧನವು (Raksha Bandhan) ಸಹೋದರ ಸಹೋದರಿಯರಿಗೆ ಮೀಸಲಾದ ಪವಿತ್ರ ಹಬ್ಬವಾಗಿದೆ. ಸಹೋದರ ತನಗೆ ರಕ್ಷಣೆ ನೀಡಲೆಂದು ಸಹೋದರಿಯು ತನ್ನ ಸಹೋದರಿನಿಗೆ ಕಟ್ಟುವ ಪವಿತ್ರ ದಾರನ್ನು ರಕ್ಷಾ ಬಂಧನ ಎಂದು ಕರೆಯಲಾಗುತ್ತದೆ. ಈ ಪವಿತ್ರ ಹಬ್ಬವನ್ನು ಶ್ರಾವಣ ಶುಕ್ಲ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ರಕ್ಷಾಸೂತ್ರವನ್ನು ಕಟ್ಟುತ್ತಾರೆ. ಹಾಗೂ ಸಹೋದರ ಅವರ ಜೀವನದುದ್ದಕ್ಕೂ ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಈ ಬಾರಿ ಭದ್ರ ಕಾಲ ಮುಹೂರ್ತ ಇರುವುದರಿಂದ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30 ಅಥವಾ 31 ಯಾವ ದಿನದಂದು ಆಚರಿಸುವುದು ಎಂಬ ಗೊಂದಲವಿದೆ. ಏಕೆಂದರೆ ಯಾವುದೇ ಶುಭ ಕಾರ್ಯದಲ್ಲಿ ಭದ್ರ ಕಾಲದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಭದ್ರ ಕಾಲದಲ್ಲಿ ಶುಭ ಕಾರ್ಯವನ್ನು ನಡೆಸಲಾಗುವುದಿಲ್ಲ. ಏಕೆಂದರೆ ಈ ಸಮಯವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬಾರಿಯ ರಕ್ಷಾಬಂಧನ ಹಬ್ಬದ ನಿಖರವಾದ ದಿನಾಂಕ ಮತ್ತು ಶುಭ ಮುಹೂರ್ತ ಯಾವಾಗ ಎಂಬ ಮಾಹಿತಿಯನ್ನು ತಿಳಿಯಿರಿ.

ಈ ಬಾರಿಯ ರಕ್ಷಾ ಬಂಧನ ಯಾವಾಗ:

ಭದ್ರ ಕಾಲ ಮುಹೂರ್ತದಿಂದಾಗಿ ಈ ಬಾರಿ ಆಗಸ್ಟ್ 30 ಅಥವಾ 31 ಯಾವ ದಿನ ರಕ್ಷಬಂಧನವನ್ನು ಆಚರಿಸಬೇಕು ಎಂಬ ಗೊಂದಲ ಅನೇಕರಲ್ಲಿದೆ. ಪ್ರತಿವರ್ಷವೂ ಶ್ರಾವಣ ಮಾಸದ ಕೊನೆಯಲ್ಲಿ ಅಂದರೆ ಹುಣ್ಣಿಮೆಯ ದಿನದಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ ರಕ್ಷಾ ಬಂಧನವನ್ನು ಆಚರಿಸಲು ನಿಖರವಾದ ಮುಹೂರ್ತ ಇಲ್ಲಿದೆ:

ಈ ವರ್ಷ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30 ಬುಧವಾರದಂದು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ದಾರ ಕಟ್ಟುವ ಶುಭ ಮುಹೂರ್ತ ಆರಂಭ : ಆಗಸ್ಟ್ 30 ರಂದು ರಾತ್ರಿ 9.01.

ರಕ್ಷೆ ಪೂರ್ಣಿಮೆ ತಿಥಿ ಆರಂಭ: ಆಗಸ್ಟ್ 30, ಬೆಳಗ್ಗೆ 10:58

ರಕ್ಷೆ ಪೂರ್ಣಿಮ ತಿಥಿಯ ಕೊನೆ: ಆಗಸ್ಟ್ 31 ಬೆಳಗ್ಗೆ 7.05

ಭದ್ರ ಕಾಲ ಮುಹೂರ್ತ ಆಗಸ್ಟ್ 30 ಬೆಳಗ್ಗೆ 10.58 ಕ್ಕೆ ಆರಂಭವಾಗಿ ರಾತ್ರಿ 9.01 ಕ್ಕೆ ಕೊನೆಗೊಳ್ಳಲಿದೆ.

ರಕ್ಷಾ ಬಂಧನದ ಮಹತ್ವ:

ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಗೌರವಿಸಲು ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬವು ಒಡಹುಟ್ಟಿದವರ ನಡುವಿನ ಭಾಂದವ್ಯವನ್ನು ಬಲಪಡಿಸುವುದು ಮಾತ್ರವಲ್ಲದೆ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಗೌರವವದ ಭಾವನೆಯನ್ನು ಬೆಳೆಸುತ್ತದೆ. ಇದು ಯಾವುದೇ ಸಂಬಂಧದಲ್ಲಿ ಪ್ರೀತಿ, ನಿಷ್ಠೆ,ನಂಬಿಕೆ ಮತ್ತು ಬೆಂಬಲದ ಮೌಲ್ಯದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಒಡಹುಟ್ಟಿದವರ ಬಾಂಧವ್ಯವನ್ನು ಬಲಪಡಿಸುತ್ತದೆ.

ಪ್ರತಿ ರಕ್ಷಾ ಬಂಧನದಂದು ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಹಾಗೂ ತಮ್ಮ ಸಹೋದರನ ಹಣೆಗೆ ತಿಲಕ ಇಟ್ಟು ಆರತಿ ಬೆಳಗುತ್ತಾರೆ. ನಂತರ ಸಹೋದರಿಯರು ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ಪವಿತ್ರ ರಕ್ಷಾ ಬಂಧನ ದಾರವನ್ನು ಕಟ್ಟುತ್ತಾರೆ. ಇದು ಸಹೋದರ ಸಹೋದರಿಯ ಬಂಧವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ ಹಾಗೂ ಅವರ ಜೀವನದುದ್ದಕ್ಕೂ ಅವರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ತಾಜಾ ಸುದ್ದಿ

Leave A Reply

Your email address will not be published.