EBM News Kannada
Leading News Portal in Kannada

2008ರ ಹಿಂದೆ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮಕ್ಕೆ ಬಿಡಿಎ ಅಧಿಕಾರಿಗಳ ಸಲಹೆ; ಕೆಲ ಸಚಿವರಿಂದ ವಿರೋಧ

0

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಕ್ರಮೀಕರಣ ಉಪಸಮಿತಿ ಸಭೆ ನಡೆಸಲಾಯಿತು.

ಬಿಡಿಎ ವ್ಯಾಪ್ತಿಯಲ್ಲಿ 2008ರ ಹಿಂದೆ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನ ಸಕ್ರಮ ಮಾಡುವುದರಿಂದ ಸರ್ಕಾರಕ್ಕೆ 50 ಸಾವಿರ ಕೋಟಿ ಲಾಭ ಬರುತ್ತದೆ. ತಕ್ಷಣವೇ ಇದನ್ನು ಜಾರಿಗೆ ತರುವಂತೆ ಅಧಿಕಾರಿಗಳು ಸಭೆಯಲ್ಲಿ ಸಿಎಂಗೆ ಸಲಹೆ ನೀಡಿದರು. ಈ ಸಂಕಷ್ಟ ಸಮಯದಲ್ಲಿ ಇದನ್ನು ಜಾರಿಗೆ ತಂದರೆ ಲಾಕ್ ಡೌನ್ ಸಂಕಷ್ಟದಿಂದ ಸರ್ಕಾರ ಪಾರಾಗಬಹುದು ಎಂದು ಅಧಿಕಾರಿಗಳು ಹೇಳಿದರು. ಆದರೆ, ಅಧಿಕಾರಿಗಳ ಈ ಸಲಹೆಗೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದರು. ಇದರಿಂಧ ಸರ್ಕಾರಕ್ಕೆ ಯಾವುದೇ ಲಾಭಾಂಶ ಇಲ್ಲ ಎಂದು ಕೆಲ ಸಚಿವರು ಅಭಿಪ್ರಾಯಪಟ್ಟರು. ಕೊನೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಬಿಡಿಎ ಅಧಿಕಾರಿಗಳಿ ಸಿಎಂ ಬಿಎಸ್​ವೈ ಸೂಚನೆ ನೀಡಿದರು. ಸಭೆ ಯಾವುದೇ ಅಂತಿಮ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿತು.

Leave A Reply

Your email address will not be published.