ಹೊಂಗಸಂದ್ರದಲ್ಲಿ 29 ಮಂದಿಗೆ ರೋಗ ಅಂಟಿಸಿದ್ದ ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು ಹೇಗೆ?
ಬೆಂಗಳೂರು(ಏ. 29): ರಾಜ್ಯದ ಪ್ರಮುಖ ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಬೆಂಗಳೂರಿನ ಎರಡು ಪ್ರದೇಶಗಳಿವೆ. ಒಂದು ಪಾದರಾಯನಪುರವಾದರೆ, ಮತ್ತೊಂದು ವಿದ್ಯಾಜ್ಯೋತಿ ನಗರ. ಹೊಂಗಸಂದ್ರದ ವಿದ್ಯಾಜ್ಯೋತಿ ನಗರದಲ್ಲಿ ಬಿಹಾರಿ ಕೂಲಿ ಕಾರ್ಮಿಕರಲ್ಲಿ ಅನೇಕರಿಗೆ ಕೊರೋನಾ ಸೋಂಕು ಹರಡಿದೆ. 29 ಮಂದಿಗೆ ಸೋಂಕು ಹರಡಲು ಮತ್ತು ನೂರಾರು ಮಂದಿಯನ್ನು ಕ್ವಾರಂಟೈನ್ಗೆ ಇಡಲು ಕಾರಣವಾಗಿರುವ ಬಿಹಾರಿ ಕಾರ್ಮಿಕನಿಗೆ (ಪಿ-419) ಸೋಂಕು ತಗುಲಿದ್ದು ಹೇಗೆ ಎಂಬುದನ್ನು ಪತ್ತೆ ಹೆಚ್ಚಲು ಬಿಬಿಎಂಪಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ಧಾರೆ.
ಈ ಬಿಹಾರಿ ಕೂಲಿ ಕಾರ್ಮಿಕ ಪಿ-419ಗೆ ಸೋಂಕು ಇರುವುದು ದೃಢಪಟ್ಟಿದ್ದು ಏಪ್ರಿಲ್ 22ರಂದು. ಅದಕ್ಕೆ ಒಂದು ತಿಂಗಳ ಮುಂಚೆ ಈತ ಬೆಂಗಳೂರಿಗೆ ಬಂದಿದ್ದು. ಆತ ಯಾವುದೇ ಸೋಂಕಿತ ಪ್ರದೇಶಕ್ಕೆ ಹೋಗಿರಲಿಲ್ಲ. ಈತ ಓಡಾಡಿರುವ ಯಾವ ಪ್ರದೇಶದಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಈತ ಯಾವ ಸೋಂಕಿತ ವ್ಯಕ್ತಿಯನ್ನೂ ಸಂಪರ್ಕಿಸಿರಲಿಲ್ಲ. ಬೆಂಗಳೂರಿಗೆ ಬರುವ ಮುನ್ನವೇ ಈತ ಸೋಂಕು ತಗುಲಿಸಿಕೊಂಡಿರಬಹುದು ಎಂಬ ಅನುಮಾನ ಇದೆ.