EBM News Kannada
Leading News Portal in Kannada

ಮದರಸಾ ಡ್ಯೂಟಿಯಲ್ಲಿದ್ದ ಪೊಲೀಸ್, 1 ವರ್ಷದ ಮಗುವಿಗೆ ಕೊರೋನಾ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 227ಕ್ಕೆ ಏರಿಕೆ

0

ಬೆಂಗಳೂರು (ಏ. 15): ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊಸದಾಗಿ 17 ಜನರಿಗೆ ಕೊರೋನಾ ಸೋಂಕು ದೃಢಪಡುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ಈಗಾಗಲೇ 11 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ವೈರಸ್​ನಿಂದ ಈಗಾಗಲೇ 11 ಜನ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಮತ್ತೆ 17 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಬ್ಬರು, ಬಾಗಲಕೋಟೆಯಲ್ಲಿ 2, ಮೈಸೂರಿನಲ್ಲಿ 10, ಕಲಬುರ್ಗಿಯಲ್ಲಿ 1, ವಿಜಯಪುರದಲ್ಲಿ 2 ಜನರಿಗೆ ಕೊರೋನಾ ವೈರಸ್​ ಇರುವುದು ಖಚಿತವಾಗಿದೆ.

ಬಾಗಲಕೋಟೆಯ ಮುಧೋಳದಲ್ಲಿ ಮದರಸಾ ಡ್ಯೂಟಿಗೆ ನಿಯೋಜನೆಯಾಗಿದ್ದ 39 ವರ್ಷದ ಪೊಲೀಸ್​ಗೆ ಇಂದು ಕೊರೋನಾ ದೃಢಪಟ್ಟಿದೆ. ಹಾಗೇ, ಮೈಸೂರಿನಲ್ಲಿ ಪತ್ತೆಯಾಗಿರುವ 10 ಕೇಸುಗಳಲ್ಲಿ 9 ಜನರು ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದವರಾಗಿದ್ದಾರೆ. ಕಲಬುರ್ಗಿಯಲ್ಲಿ 1 ವರ್ಷದ ಮಗುವಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಉಳಿದವರಿಗೆ ಕುಟುಂಬದಲ್ಲಿದ್ದ ಸೋಂಕಿತರಿಂದ ಕೊರೋನಾ ವೈರಸ್​ ಹರಡಿದೆ.

ಒಟ್ಟು 277 ಸೋಂಕಿತರಲ್ಲಿ ಈಗಾಗಲೇ 75 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈಗಾಗಲೇ 11 ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತ ಜಿಲ್ಲೆಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇಂದು ಪತ್ತೆಯಾದ ಹೊಸ ಕೊರೋನಾ ಪ್ರಕರಣಗಳಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ.

Leave A Reply

Your email address will not be published.