EBM News Kannada
Leading News Portal in Kannada

ಅಮ್ಮನದ್ದು ತರಕಾರಿ ಮಾರಾಟ, ಮಗನದ್ದು ಪೊಲೀಸ್​ ಕೆಲಸ; ಬಡವರ ಹಸಿವು ನೀಗಿಸುವ ಕಾಯಕ ಮಾತ್ರ ನಿರಂತರ

0

ಯಾದಗಿರಿ (ಏ.14): ಲಾಕ್​​ಡೌನ್ ನಂತರ ರಾಜಕೀಯ ನಾಯಕರು, ಸಂಘ ಸಂಸ್ಥೆಗಳು ಬಡವರು, ಕಾರ್ಮಿಕರು, ನಿರ್ಗತಿಕರಿಗೆ ಅನ್ನ, ನೀರು, ಆಹಾರ ಧಾನ್ಯ ವಿತರಣೆ ಮಾಡಿ ಹಸಿವು ನಿಗಿಸುತ್ತಿದ್ದಾರೆ. ಈ ಮಧ್ಯೆ, ಯಾದಗಿರಿ ಜಿಲ್ಲೆಯ ಸುರಪುರನಲ್ಲಿ ಪೊಲೀಸ ‌ಪೇದೆಯೊಬ್ಬ ಕಳೆದ ಒಂದು ವರ್ಷದಿಂದ ಬಡವರ, ನಿರ್ಗತಿಕರ ಹಸಿವು ನಿಗಿಸುವ ಕಾರ್ಯ ಮಾಡುತ್ತಿದ್ದಾರೆ.

ಕಲಬುರಗಿ ತಾಲೂಕಿನ ಬೊಪಾಲತೆಗನೂರ ಗ್ರಾಮದ ನಿವಾಸಿಯಾದ ಪೊಲೀಸ್ ಪೇದೆ ದಯಾನಂದ ಜಮದಾರ ಅವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಬಡವರ ಕಳಕಳಿ ತೋರುತ್ತಿದ್ದಾರೆ. ಕಳೆದ 5 ವರ್ಷದಿಂದ ಕರ್ತವ್ಯ ಮಾಡುತ್ತಿದ್ದಾರೆ. ಸುರಪುರ ಪೊಲೀಸ ಠಾಣೆಯಲ್ಲಿ ಕಳೆದ ಮೂರು ವರ್ಷದಿಂದ ದಯಾನಂದ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ದಯಾನಂದ ಅವರು ‌ಕೂಡ ಕಡುಬಡತನದಲ್ಲಿ ಬೆಳೆದವರು. ಅವರ ತಂದೆ ಬಾಬುರಾವ ಜಮದಾರ ತಾಯಿ ಅಂಬವ್ವ ಅವರು ಕೂಡ ಕಲಬುರಗಿಯಲ್ಲಿ ತರಕಾರಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದರು.-
ತಂದೆ ತಾಯಿಯಂದರ ಜೊತೆ ದಯಾನಂದ ಕೂಡ ತರಕಾರಿ ಮಾರಾಟ ಮಾಡಿದ್ದರು. ಇವುಗಳ ಮಧ್ಯೆ ಓದಿ ಸರಕಾರಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ. ತಂದೆ ಬಾಬುರಾವ ತರಕಾರಿ ಮಾರಾಟ ಮಾಡುವ ಜಾಗದಲ್ಲಿಯೇ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದರು. ದಯಾನಂದ ಅವರ ತಾಯಿ ಈಗ ಕೂಡ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹೆತ್ತವರು‌ ಕೂಡ ದಯಾನಂದಗೆ ಬಡವರ ಕಾಳಜಿ ಮೆರೆಯಬೇಕೆಂದು ಹೇಳಿದ್ದರು. ಇದರಿಂದ ದಯಾನಂದ ಸದಾ ಬಡವರ ಪರ ಕಾಳಜಿ ತೊರುತ್ತಿದ್ದಾರೆ.

Leave A Reply

Your email address will not be published.