EBM News Kannada
Leading News Portal in Kannada

‘ಲಾಕ್​​ಡೌನ್​​ ನಂತರ ಮುಂದೇನು? ಯಾವ ಕ್ರಮ ಕೈಗೊಳ್ತೀರಿ ತಿಳಿಸಿ’: ಸರ್ಕಾರದ ಕಾರ್ಯದರ್ಶಿಗಳಿಗೆ ಸಿಎಸ್​​​ ವಿಜಯ್​​ ಭಾಸ್ಕರ್ ಸೂಚನೆ

0

ಬೆಂಗಳೂರು(ಏ.08): ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಏಪ್ರಿಲ್ 14ರವರೆಗೆ ದೇಶವ್ಯಾಪಿ ಲಾಕ್​ಡೌನ್ ಇದೆ. ಇದು ಮುಗಿಯಲು ಇನ್ನು 6 ದಿನ ಇದೆ. ಲಾಕ್​ಡೌನ್ ತೆರವುಗೊಳಿಸಲು ಕೇಂದ್ರ ಸರ್ಕಾರ ವಿವಿಧ ಮಾರ್ಗೋಪಾಯಗಳನ್ನ ಶೋಧಿಸುತ್ತಿದೆ. ಇದೇ ಹೊತ್ತಿನಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಿರಿಯ ವೈದ್ಯರ ಸಲಹೆ ಮೇರೆಗೆ ಇನ್ನೂ ಭಾರತದಲ್ಲಿ ಹಲವು ದಿನಗಳ ಕಾಲ ಲಾಕ್​​ಡೌನ್​​​ ಮುಂದುವರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಮಹತ್ವದ ಆದೇಶ ಹೊರಡಿಸಿದ್ದಾರೆ.

ಏಪ್ರಿಲ್​​​ 14ನೇ ತಾರೀಕಿನಂದು ರಾಜ್ಯದಲ್ಲಿ ಲಾಕ್​​ಡೌನ್​​ ಮುಕ್ತಾಯವಾಗಲಿದೆ. ಇದಾದ ನಂತರ ಮುಂದೇನು? ಕೋವಿಡ್​​​-19 ತಡೆಗೆ ಯಾವ 10 ಅಗತ್ಯ ಕ್ರಮಗಳು ಕೈಗೊಳ್ಳಬಹುದು ಎಂದುದನ್ನು ಏಪ್ರಿಲ್​​ 9ನೇ ತಾರಿಕಿನೊಳಗೆ ವರದಿ ನೀಡಿ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

Leave A Reply

Your email address will not be published.