EBM News Kannada
Leading News Portal in Kannada

ಸ್ಥೈರ್ಯ ನಿಧಿಯ ಫಲಾನುಭವಿಗಳಲ್ಲಿ ಶೇ. 10 ರಷ್ಟು ಮಂದಿ ಮಾತ್ರ ವಿವೇಚನೆಯಿಂದ ಪರಿಹಾರ ಹಣ ಬಳಕೆ

0

ಮಂಗಳೂರು : ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ನೆರವು ನೀಡುವ ಮೂಲಕ ಅವರಿಗೆ ಪುನರ್ ಜೀವನ ನೀಡುವ ಉದ್ದೇಶದಿಂದ ಸರ್ಕಾರ ಸ್ಥೈರ್ಯ ನಿಧಿಯನ್ನು 2015ರಲ್ಲಿ ಸ್ಥಾಪಿಸಿತ್ತು.

ಇದು ಪರಿಚಯವಾದಾಗಿನಿಂದಲೂ ಮಾರ್ಚ್ 2018ರವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41 ಸಂತ್ರಸ್ತೆಯರು ಒಟ್ಟಾರೇ, 9.85 ಲಕ್ಷ ರೂಪಾಯಿ ಪರಿಹಾರವನ್ನು ಪಡೆದುಕೊಂಡಿದ್ದಾರೆ.

ಆದಾಗ್ಯೂ, ಹೀಗೆ ಬಂದ ಹಣದಲ್ಲಿ ಕೇವಲ ಶೇ.10 ರಷ್ಟು ಸಂತ್ರಸ್ತೆಯರು ಮಾತ್ರ ವಿವೇಚನೆಯಿಂದ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಗೆಳತಿ ( ಲೇಡಿ ಗೌಸಿಯಾ ಆಸ್ಪತ್ರೆಯ ಮಹಿಳೆಯರ ವಿಶೇಷ ಘಟಕ ) ಸಲಹೆಗಾರರು ಹೇಳಿದ್ದಾರೆ.

ಪಂಡೇಶ್ವರ್ ಮಹಿಳಾ ಪೊಲೀಸ್ ಠಾಣೆಯ ಮಾಹಿತಿ ಪ್ರಕಾರ ಬಂದ ಹಣದಲ್ಲಿ ಒಬ್ಬರು ಮೊಬೈಲ್ ಪೋನ್ ಕೊಂಡುಕೊಂಡರೆ, ಮತ್ತೊಬ್ಬರು ನೈಲ್ ಪಾಲಿಶ್ ಕೊಂಡಿದ್ದಾರೆ. ಆಕ್ರಮ ಲೈಂಗಿಕ ದೌರ್ಜನ್ಯಕ್ಕೊಳಗಾದವರು ವಿವೇಚನೆ ಇಲ್ಲದೆ ಹಣವನ್ನು ಖರ್ಚು ಮಾಡುತ್ತಾರೆ ಎಂದು ಮಹಿಳಾ ಸಲಹೆಗಾರ್ತಿಯರು ಹೇಳುತ್ತಾರೆ.

21 ವರ್ಷದ ಸಂತ್ರಸ್ತೆಯೊಬ್ಬರು ಸರ್ಕಾರದಿಂದ ಪ್ರತಿ ತಿಂಗಳ ಪರಿಹಾರ ಹಣವನ್ನು ಪಡೆಯುತ್ತಾರೆ. ಆದರೆ, ವಿವೇಚನೆಯಿಲ್ಲದೆ ಖರ್ಚು ಮಾಡುತ್ತಾರೆ ಎಂದು ಅವರು ಹೇಳುತ್ತಾರೆ.
ಈ ನಿಧಿ ಪರಿಚಯಿಸಿದ ಮೊದಲ ವರ್ಷದಲ್ಲಿ 20 ಸಂತ್ರಸ್ತೆಯರಿಗೆ 4.60 ಲಕ್ಷ ಪರಿಹಾರ ನೀಡಲಾಗಿದೆ. 2016-17 ರಲ್ಲಿ ಐವರು ಸಂತ್ರಸ್ತೆಯರು 1.25 ಲಕ್ಷ ಪರಿಹಾರ
ಪಡೆದಿದ್ದಾರೆ. 2017-18 ರ ಅವಧಿಯಲ್ಲಿ 16 ಸಂತ್ರಸ್ತೆಯರು ಒಟ್ಟು 4 ಲಕ್ಷ ಪಡೆದುಕೊಂಡಿದ್ದಾರೆ. ಈ ಅಂಕಿ ಅಂಶಗಳು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ವರ್ಷದವರೆಗೂ ಮಂಗಳೂರು ಪೊಲೀಸರು 15 ಅತ್ಯಾಚಾರ ಪ್ರಕರಣ ದಾಖಲಿಸಿದ್ದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಐವರು ಮಾತ್ರ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಥೈರ್ಯ ನಿಧಿಗೆ ಹೇಳಿದೆ.

Leave A Reply

Your email address will not be published.