EBM News Kannada
Leading News Portal in Kannada

ಡಿಜಿಪಿ ನೀಲಮಣಿ ರಾಜು ವರ್ಗಾವಣೆ ಸುದ್ದಿ: ರಾಜ್ಯ ಸರ್ಕಾರ ನಿರಾಕರಣೆ

0

ಬೆಂಗಳೂರು: ರಾಜ್ಯದ ಮೊದಲ ಮಹಿಳಾ ಡಿಜಿಪಿ ನೀಲಮಣಿ ರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈ ಸುದ್ದಿಯನ್ನು ರಾಜ್ಯ ಸರ್ಕಾರ ನಿರಾಕರಿಸಿದೆ.

ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಯಾವುದೇ ಆಡಳಿತಾತ್ಮಕ ನಿರ್ಣಯ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಆದರೆ, ಈ ಸಂಬಂಧ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಕುಮಾರಸ್ವಾಮಿ ಪದಗ್ರಹಣ ಸಮಾರಂಭದ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಲಮಣಿ ರಾಜು ಅವರ ಬಗ್ಗೆ ಅಸಮಾಧಾನಗೊಂಡಿದೆ.

ವಿಧಾನಸೌಧದವರೆಗೂ ವಾಹನ ನಿರ್ಬಂಧಿಸಿದ್ದರಿಂದ ಮಮತಾ ಬ್ಯಾನರ್ಜಿ ಜನರಲ್ ಪೋಸ್ಟ್ ಆಫೀಸ್ ನಿಂದ ವಿಧಾನಸೌಧದವರೆಗೂ ನಡೆದು ಸಾಗಿದ್ದರು. ಈ ಸಂಬಂಧ ಕುಮಾರಸ್ವಾಮಿ ನೀಲಮಣಿ ರಾಜು ಅವರಿಗೆ ನೋಟಿಸ್ ನೀಡಿದ್ದು, ವಿವರಣೆ ಕೇಳಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು.

ಈ ಘಟನೆ ನಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ನ್ಯೂಸ್ ವೆಬ್ ಸೈಟ್ ಮಾಹಿತಿ 19 ಸಾವಿರಕ್ಕೂ ಹೆಚ್ಚು ಬಾರಿ ಹಂಚಿಕೆಯಾಗಿತ್ತು. ಫೇಸ್ ಬುಕ್ ನಲ್ಲಿ 5 ಸಾವಿರ ಹಂಚಿಕೆಯಾಗಿತ್ತು .

ಆದಾಗ್ಯೂ, ಈ ಮಾಹಿತಿಯನ್ನು ರಾಜ್ಯಸರ್ಕಾರ ಹಾಗೂ ಡಿಜಿ, ಐಜಿಪಿ ಕಾರ್ಯಾಲಯ ತಳ್ಳಿಹಾಕಿದೆ. ಗೃಹ ಇಲಾಖೆಯಿಂದ ಇತಂಹ ಯಾವುದೇ ಪ್ರಸ್ತಾವ ಆದೇಶ ಆಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

Leave A Reply

Your email address will not be published.