EBM News Kannada
Leading News Portal in Kannada

ಸ್ನೇಹಿತನೊಂದಿಗೆ ಚಿತ್ರದಲ್ಲಿ ನಟಿಸುವುದು ಖುಷಿ ತಂದಿದೆ: ತನ್ಯಾ ಹೋಪ್

0
ಸ್ಯಾಂಡಲ್ವುಡ್ ನಲ್ಲಿ ಸದ್ಯ ಹಲ್ ಚಲ್ ಸೃಷ್ಟಿಸುತ್ತಿರುವವರು ಯಾರಾದರೂ ಇದ್ದಾರೆ ಅಂದರೆ ಅದು ತನ್ಯಾ ಹೋಪ್. ಅದರಲ್ಲಿ ಆಶ್ಚರ್ಯವೇನೂ ಇಲ್ಲ. ತನ್ಯಾ ಹೋಪ್ ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸುವುದಕ್ಕೆ ಮೊದಲೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಲ್ಲಿ ಅಭಿನಯಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಹೋಂ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ ಜತೆ ಅಭಿನಯಿಸಿದ್ದ ತನ್ಯಾ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕನ್ನಡದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಪಾದಾರ್ಪಣೆ ‘ಅಮರ್’ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
ಅಮರ್ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರದ ಕುರಿತಂತೆ ಮಾತನಾಡಿರುವ ತನ್ಯಾ ಹೋಪ್, ಸ್ನೇಹಿತನೊಂದಿಗೆ ಪರದೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದಾರೆ. ಅಭಿಷೇಕ್ ನನಗೆ ಚನ್ನಾಗಿ ಗೊತ್ತು. ಅವರ ಪಾದಾರ್ಪಣೆ ಚಿತ್ರದಲ್ಲಿ ನಾನು ಅಭಿನಯಿಸುವ ಅವಕಾಶ ಸಿಕ್ಕಿದೆ ಎಂದರು.
ಇನ್ನು ಚಿತ್ರದ ಕುರಿತಂತೆ ಮಾತನಾಡಿದ ನಾಗಶೇಖರ್, ಚಿತ್ರದಲ್ಲಿನ ತಮ್ಮ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವಿದೆ. ಮುಂದಿನ ದಿನಗಳಲ್ಲಿ ಸ್ಯಾಂಡಲ್ವುಡ್ ಚಿತ್ರರಂಗದಲ್ಲಿ ಅವರು ಬೇಡಿಕೆಯ ನಟಿಯಾಗಲಿದ್ದಾರೆ. ಅಭಿಶೇಖ್ ಗೆ ಹೊಂದುವಂತಾ ನಟಿಯನ್ನು ಹುಡುಕುತ್ತಿದ್ದೆ. ಅದರಂತೆ ತನ್ಯಾ ಹೋಪ್ ಸಿಕ್ಕಿದ್ದಾರೆ ಎಂದರು.
ಅಮರ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣವಿರಲಿದೆ. ಚಿತ್ರವನ್ನು ಸಂದೇಶ್ ಪ್ರೊಡೆಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಮೇ 28ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
Leave A Reply

Your email address will not be published.