ಜೂನ್ 7ಕ್ಕೆ ಭಾರತದಲ್ಲಿ ರಜಿನಿಯ ‘ಕಾಳ’, ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರ ಬಿಡುಗಡೆ!
ಮುಂಬೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರ ಹಾಗೂ ಹಾಲಿವುಡ್ ನ ಬಹುನಿರೀಕ್ಷಿತ ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರಗಳು ಭಾರತದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿವೆ.
ಜೂನ್ 7ಕ್ಕೆ ಸಿನಿ ಪ್ರಿಯರಿಗೆ ಡಬಲ್ ಡಮಾಕ ಸಿಗಲಿದೆ. ಹೌದು ಬಹು ನಿರೀಕ್ಷೆ ಹುಟ್ಟಿಸಿರುವ ಕಾಳ ಹಾಗೂ ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರಗಳು ಏಕಕಾಲಕ್ಕೆ ತೆರೆಗಪ್ಪಳಿಸಲಿವೆ.
ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರ ಜುರಾಸಿಕ್ ವರ್ಲ್ಡ್ ಚಿತ್ರದ ಮುಂದುವರೆದ ಸರಣಿ ಚಿತ್ರವಾಗಿದ್ದು ಈ ಚಿತ್ರವನ್ನು ಜೆಎ ಬಯೋನಾ ನಿರ್ದೇಶಿಸಿದ್ದಾರೆ. ಈ ಚಿತ್ರ ಭಾರತದಲ್ಲಿ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಅವತರಣಿಕೆಯಲ್ಲಿ ಸುಮಾರು 2300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಇನ್ನು ಕಾಳ ಚಿತ್ರವನ್ನು ಧನುಷ್ ಅವರ ವಂಡರ್ ಫಿಲ್ಮ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಾಣವಾಗಿದೆ. ಕಾಳ ಚಿತ್ರ ಸಹ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.