ಪಾಕೀಝಾ ನಟಿ ಗೀತಾ ಕಪೂರ್ ವಿಧಿವಶ
ಮುಂಬೈ: ಪಾಕೀಝಾ ಮತ್ತು ರಝಿಯಾ ಸುಲ್ತಾನ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದ ಬಾಲಿವುಡ್ ನ ಹಿರಿಯ ನಟಿ ಗೀತಾ ಕಪೂರ್ ಅವರು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಕಪೂರ್ ಅವರು ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮುಂಬೈನ ಎಸ್ಆರ್ವಿ ಆಸ್ಪತ್ರೆಯಲ್ಲಿ ಕೊನೆಯೂಸಿರೆಳೆದಿದ್ದಾರೆ ಎಂದು ನಿರ್ಮಾಪಕ ಅಶೋಕ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.
ಎಪ್ರಿಲ್ 21ರಂದು ರಕ್ತದೊತ್ತಡದ ಏರಿಳಿತದಿಂದ ಬಳಲುತ್ತಿದ್ದ 58 ವರ್ಷದ ಗೀತಾ ಅವರನ್ನು ಆಕೆಯ ಪುತ್ರ ರಾಜಾ ಕಪೂರ್ ಎಸ್ಆರ್ವಿ ಆಸ್ಪತ್ರೆಗೆ ಸೇರಿಸಿ ಹಣ ತರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ. ನಂತರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರು.