EBM News Kannada
Leading News Portal in Kannada

‘ಓಲಾ’ ವಿರುದ್ಧ ಸಿಡಿದೆದ್ದ ನಟಿ ಪಾರೂಲ್ ಯಾದವ್, ಯಾಕೆ ಗೊತ್ತಾ?

0
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪಾರೂಲ್ ಯಾದವ್ ಓಲಾ ಸಂಸ್ಥೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಓಲಾ ಚಾಲಕನನ್ನು ಟ್ವಿಟರ್ ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ನಟಿ,  ಸ್ನೇಹಿತರೇ.. ಓಲಾ ಸಂಸ್ಥೆ ತನ್ನ ಚಾಲಕರ ಪರಿಶೀಲನೆ ಮಾಡುವುದೇ ಇಲ್ಲ. ನಾನೂ ಕೂಡ ಇಂತಹ ಪರಿಸ್ಥಿತಿ ಅನುಭವಿಸಿದ್ದು, ಕಾರಿನಲ್ಲಿ ಮರೆತು ಬಂದಿದ್ದ ವಸ್ತುವನ್ನು ಚಾಲಕ ಬಚ್ಚಿಡಲು ಪ್ರಯತ್ನಿಸಿದ್ದ. ಈ  ಬಗ್ಗೆ ಪೊಲೀಸ್ ದೂರು ನೀಡಿದ ಬಳಿಕ ಪೊಲೀಸರು ವಿಚಾರಿಸಿದಾಗ ಆತ ನನ್ನ ವಸ್ತುವನ್ನು ವಾಪಸ್ ನೀಡಿದ್ದಾನೆ, ಕರ್ನಾಟಕ ಪೊಲೀಸರಿಗೆ ನನ್ನ ಧನ್ಯವಾದ ಎಂದು ಪರೂಲ್ ಯಾದವ್ ಟ್ವೀಟ್ ಮಾಡಿದ್ದಾರೆ.
ಇನ್ನು ಮಾಧ್ಯಮವೊಂದು ಇದೇ ವಿಚಾರಕ್ಕೆ ಸಂಬಂಧಿಸಿ ಮಾಡಿರುವ ವರದಿಯಂತೆ, ನಟಿ ಪಾರೂಲ್ ಯಾದವ್ ತಮ್ಮ ಮನೆಯನ್ನು ಶಿಫ್ಟ್ ಮಾಡಿದ್ದಾರೆ. ಹಾಗಾಗಿ ಅವರು ಓಲಾ ಕ್ಯಾಬ್ ಬುಕ್ ಮಾಡಿ ಅದರಲ್ಲಿ ಪ್ರಯಾಣಿಸಿದ್ದರು. ದಾರಿ ಮಧ್ಯೆದಲ್ಲಿ ಸ್ನೇಹಿತೆಯ ಮದುವೆ ವಾರ್ಷಿಕೋತ್ಸವಕ್ಕಾಗಿ ಒಂದು ವಾಚ್ ನ್ನು ಖರೀದಿಸಿದ್ದರು. ವಾಚ್ ಖರೀದಿಸಿ ಅದನ್ನು ಓಲಾದಲ್ಲಿ ಇಟ್ಟು ಮರೆತು ಹೋಗಿದ್ದಾರೆ. ಓಲಾದಲ್ಲಿ ಬರುತ್ತಿದ್ದ ವಸ್ತುಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಲು ಪಾರೂಲ್ ಮುಂಬೈಗೆ ಹೋಗಲು ವಿಮಾನ ನಿಲ್ದಾಣದತ್ತ ಹೋಗಿದ್ದಾರೆ. ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ವಾಚ್ ಕಾಣೆ ಆಗಿರುವುದು ತಿಳಿದು ಬಂದಿದೆ. ಆಗ ಓಲಾ ಚಾಲಕನಿಗೆ ಕರೆ ಮಾಡಿ ವಾಚ್ ಬಗ್ಗೆ ವಿಚಾರಿಸಿದ್ದಾರೆ. ಆಗ ಚಾಲಕ ನನಗೆ ಯಾವ ವಾಚ್ ಬಗ್ಗೆಯೂ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾನೆ.
ತಕ್ಷಣವೇ ಪಾರೂಲ್ ಯಾದವ್ ವಿಮಾನ ನಿಲ್ದಾಣನಲ್ಲಿರುವ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಮೂರು ದಿನದಲ್ಲೇ ಓಲಾ ಚಾಲಕನನ್ನು ಸೆರೆ ಹಿಡಿದಿದ್ದಾರೆ. ಆಗ ಓಲಾ ಚಾಲಕ ಆ ವಾಚ್ ಅನ್ನು ಪಾರೂಲ್‍ಗೆ ಹಿಂದಿರುಗಿಸಿದ್ದಾರೆ. ನಂತರ ಪಾರೂಲ್ ಇ-ಮೇಲ್ ಮೂಲಕ ಓಲಾದವರಿಗೆ ದೂರು ನೀಡಿದ್ದಾರೆ. ಆದರೆ ಮೂರು ದಿನವಾದರೂ ಓಲಾದವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಹಾಗೂ ಪಾರೂಲ್ ಅವರನ್ನು ಸಂಪರ್ಕಿಸಿ ವಿಚಾರಿಸಲಿಲ್ಲ ಎಂದು ಹೇಳಲಾಗಿದೆ.

Parul Yadav

@TheParulYadav

Dear friends – Please note that @olacabs don’t verify their drivers. I just went through a crazy situation where the driver hid a package containing expensive watches bought as gifts for a 50th wedding anniversary when I stepped out of the car for a couple of mins.

@TheParulYadav

He then pretended we never had the package when dropping me to the airport. @ola_support didn’t respond at all initially. Thank God we didn’t wait for them and filed a police complaint instantly. I want to let you know that the fab @BlrCityPolice have recovered the watches

But sadly @ola_supports still haven’t been able to even contact their driver. @bhash Shame on you. Everyone please be careful of using Ola. Their drivers are not verified and Ola can’t reach them in an emergency. And yes a big thank you to the Karnataka Police

Leave A Reply

Your email address will not be published.