EBM News Kannada
Leading News Portal in Kannada

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲೆಕ್ಕದಲ್ಲೇ ಗೊಂದಲ; ಹಾಗಿದ್ರೆ ಅಸಲಿ ಪ್ರಕರಣಗಳೆಷ್ಟು?

0

ಬೆಂಗಳೂರು (ಏ.19): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರ ಸೋಂಕಿತರು ಸಂಖ್ಯೆ ಬಗ್ಗೆ ನೀಡಿದ ದ್ವಂದ ಲೆಕ್ಕ ಗೊಂದಲ ಸೃಷ್ಟಿಸಿದೆ.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ನಿಯೋಗ ಇಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ​ ಮಹಾಮಾರಿಯ ವಿರುದ್ಧ ಸರ್ಕಾರ ಎಂತಹಾ ಕ್ರಮವನ್ನು ಜಾರಿಗೊಳಿಸಬೇಕು? ಏನೇನು ಯೋಜನೆಗಳು ತುರ್ತು ಜಾರಿಗೆ ಬರಬೇಕು? ಎಂದು ಕಾಂಗ್ರೆಸ್ 15 ಅಂಶಗಳನ್ನೊಳಗೊಂಡ ವರದಿ ನೀಡಿತ್ತು. ಈ ವೇಳೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕಾಂಗ್ರೆಸ್​ ನಿಯೋಗಕ್ಕೆ ರಾಜ್ಯದಲ್ಲಿ 410 ಕೊರೋನಾ ಪ್ರಕರಣಗಳಿವೆ ಎಂದು ವರದಿ ನೀಡಿದ್ದಾರೆ.

ಆದರೆ, ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರವ ಹೆಲ್ತ್ ಬುಲೆಟಿನ್​ನಲ್ಲಿ ನೀಡಿರುವ ಲೆಕ್ಕವೇ ಬೇರೆ ಇದೆ. ಈ ಹೆಲ್ತ್​ ಬುಲೆಟಿನ್​ನಲ್ಲಿ ರಾಜ್ಯದಲ್ಲಿ ಒಟ್ಟೂ 388 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಲಾಗಿದೆ.

ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಅಷ್ಟಕ್ಕೂ ಆರೋಗ್ಯ ಇಲಾಖೆ ನೀಡಿರುವ ಲೆಕ್ಕ ಸರಿಯೋ ಅಥವಾ ಕಾಂಗ್ರೆಸ್​ ನಿಯೋಗಕ್ಕೆ ನೀಡಿರುವ ಸಂಖ್ಯೆ ಸರಿಯೋ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೆ, ಈ ರೀತಿ ಬೇರೆ ಬೇರೆ ರೀತಿಯ ಲೆಕ್ಕ ನೀಡುವ ಅವಶ್ಯಕತೆ ಏನಿದೆ ಎಂದು ಅನೇಕರು ಪ್ರಶ್ನಿಸಿದ್ದಾರೆ.

Leave A Reply

Your email address will not be published.