ಬ್ರೇಕಪ್ ಆ ಕ್ಷಣಕ್ಕೆ ನೋವು ನೀಡಬಹುದು, ಆದರೆ ಅದರಿಂದ ನೀವು ಕಲಿಯುವುದು ಬಹಳಷ್ಟಿದೆ – Kannada News | Breakup can also give important lessons for relationship, a relationship expert is telling some important things
Breakup: ಬ್ರೇಕಪ್ ನೋವಿನಿಂದ ಕೂಡಿದ್ದರೂ ಕೂಡ ಅದರಿಂದ ಕಲಿಯುವುದು ಕೂಡ ಅಷ್ಟೇ ಇದೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಿರಬಹುದು, ನಿಮಗೆ ಸುಳ್ಳು ಹೇಳಿ ಬೇರೊಬ್ಬರ ಜತೆಗೆ ಪ್ರೀತಿಯಲ್ಲಿ ಬಿದ್ದಿರಬಹುದು.
Image Credit source: Healthshots.com
ಬ್ರೇಕಪ್ ನೋವಿನಿಂದ ಕೂಡಿದ್ದರೂ ಕೂಡ ಅದರಿಂದ ಕಲಿಯುವುದು ಕೂಡ ಅಷ್ಟೇ ಇದೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಿರಬಹುದು, ನಿಮಗೆ ಸುಳ್ಳು ಹೇಳಿ ಬೇರೊಬ್ಬರ ಜತೆಗೆ ಪ್ರೀತಿಯಲ್ಲಿ ಬಿದ್ದಿರಬಹುದು. ಆಗ ನಿಮ್ಮನ್ನು ನಿರ್ಲಕ್ಷಿಸುವುದಾಗಲಿ, ಕಾರಣವೇ ಇಲ್ಲದೆ ನಿಮ್ಮ ಬೈಯ್ಯುವುದಾಗಲಿ ಮಾಡಬಹುದು. ಆಗ ನೀವು ಎಚ್ಚೆತ್ತುಕೊಳ್ಳಲೇಬೇಕು. ಉಸಿರುಗಟ್ಟುವ ವಾತಾವರಣದಲ್ಲಿ ಇರುವುದಕ್ಕಿಂತ ಹೊರಬರುವುದೇ ಲೇಸು.
ಪ್ರೀತಿ ನಿಜವಾಗಿಯೂ ಕುರುಡು
ಪ್ರೀತಿ ಎಂಬುದು ನಿಜವಾಗಿಯೂ ಕುರುಡು, ಯಾಕೆಂದರೆ ಪ್ರೀತಿಯಲ್ಲಿರುವಾಗ ಯಾವುದು ಸರಿ, ಯಾವುದು ತಪ್ಪೆಂದು ಅರಿಯದ ಸ್ಥಿತಿಯಲ್ಲಿರುತ್ತಾರೆ. ಸಂಗಾತಿ ಏನೇ ಹೇಳಿದರು ಸತ್ಯವೆಂದು ನಂಬುತ್ತೀರಿ, ನೀವು ಬೇಡ ಎಂದಾದಾಗ ಅವರ ವರಸೆಯೇ ಬದಲಾಗುವುದು. ಆಗ ನೀವು ನೋವು ಪಡುತ್ತೀರಿ.
ಮಾತನಾಡುವುದು ಮುಖ್ಯ
ಯಾವುದೇ ಸಂಬಂಧವಾಗಲೀ ಸಂವಹನ ಎಂಬುದು ಮುಖ್ಯ, ಹಾಗೆಯೇ ಭಾವನೆಗಳಿಗೂ ಕೂಡ ಬೆಲೆ ಕೊಡಬೇಕು. ಪ್ರಾಮಾಣಿಕವಾಗಿ ಮಾತನಾಡುವುದನ್ನು ನೀವು ಕಲಿಯಬೇಕು.
ಪ್ರತಿ ಸಂಬಂಧದಲ್ಲಿ ಗಡಿಗಳು ಮುಖ್ಯ
ಸಂಬಂಧವನ್ನು ಕಾಪಾಡಿಕೊಳ್ಳಬೇಕಾದರೆ ನಿಮ್ಮ ನಿಮ್ಮ ಗಡಿಯನ್ನು ದಾಟಿ ಹೋಗಬೇಡಿ, ನಿಮ್ಮ ಗಡಿಯಲ್ಲೇ ನಿಂತು ಪ್ರಯತ್ನಪಡಿ. ಭವಿಷ್ಯದಲ್ಲಿ ಸಂಭವನೀಯ ಸಮಸ್ಯೆಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಯಾರೊಬ್ಬರ ವೈಯಕ್ತಿಕ ಜಾಗವನ್ನು ಪ್ರವೇಶಿಸುವ ತಪ್ಪು ಮಾಡಬೇಡಿ.
ರಾಜಿ ಮಾಡಿಕೊಳ್ಳಿ ಟೀಮ್ವರ್ಕ್ ಇರಲಿ
ಇಬ್ಬರೂ ಸಂಬಂಧದಲ್ಲಿರುವಾಗ ಇಬ್ಬರ ಅಗತ್ಯಗಳನ್ನು ಕೂಡ ನೋಡಿಕೊಳ್ಳಬೇಕು. ಸ್ವಾಭಾವಿಕವಾಗಿ ಇಬ್ಬರೂ ರಾಜಿ ಮಾಡಿಕೊಳ್ಳಬೇಕು. ಆಗ ಮಾತ್ರ ನೀವು ಪರಸ್ಪರ ಸಹಕರಿಸಲು ಸಾಧ್ಯವಾಗುತ್ತದೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕು. ಪರಸ್ಪರರ ಗುರಿ ಹಾಗೂ ಆಕಾಂಕ್ಷೆಯನ್ನು ಬೆಂಬಲಿಸುವುದನ್ನು ಕಲಿಯಬೇಕು.
ಗೌರವ ಇರಲಿ
ನಿಮ್ಮ ಸಂಗಾತಿಯ ಭಾವನೆಗಳು, ಆಲೋಚನೆಗಳು ಮತ್ತು ವ್ಯಕ್ತಿತ್ವವನ್ನು ಗೌರವಿಸಿ, ಸಂಗಾತಿ ಏನೇ ಕೆಲಸ ಮಾಡಿದರೂ ಅದನ್ನು ಒಪ್ಪಿಕೊಳ್ಳುವುದು, ಗೌರವಿಸುವುದನ್ನು ಕಲಿಯಿರಿ.
ಹಳೆಯ ತಪ್ಪುಗಳನ್ನು ಪುನರಾವರ್ತಿಸಬೇಡಿ
ಯಾವುದೇ ಸಂಬಂಧದಲ್ಲಿ ಜಗಳಗಳು ತುಂಬಾ ಸಾಮಾನ್ಯವಾಗಿದೆ. ಅವುಗಳನ್ನು ತಪ್ಪಿಸುವ ಬದಲು, ಅವುಗಳನ್ನು ರಚನಾತ್ಮಕವಾಗಿ ನಿರ್ವಹಿಸಲು ಕಲಿಯಿರಿ. ಸಮಸ್ಯೆಗಳನ್ನು ಮುಕ್ತವಾಗಿ ಪರಿಹರಿಸುವುದು ಮತ್ತು ಒಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ನಿಮ್ಮ ಬಂಧವನ್ನು ಬಲಪಡಿಸುತ್ತದೆ. ಯಾವುದೇ ಜಗಳದಿಂದ ಓಡಿಹೋಗಬೇಡಿ ಮತ್ತು ಮಾತನಾಡುವುದನ್ನು ನಿಲ್ಲಿಸಬೇಡಿ.
ಮತ್ತೊಬ್ಬರ ಪ್ರೀತಿಯಲ್ಲಿ ಬೀಳುವ ಮುನ್ನ ಸ್ವಲ್ಪ ಸಮಯ ತೆಗೆದುಕೊಳ್ಳಿ
ನಿಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ಹೊಸ ಸಂಬಂಧದಲ್ಲಿ ಬೀಳುವುದು, ಹಿಂದಿನ ತಪ್ಪುಗಳನ್ನು ಪುನರಾವರ್ತಿಸಲು ಕಾರಣವಾಗಬಹುದು. ವ್ಯಕ್ತಿಯನ್ನು ಹಾಗೂ ಸ್ವಭಾವವನ್ನು ತಿಳಿದುಕೊಳ್ಳಲು ಪ್ರಾರಂಭಿಸಿ.