EBM News Kannada
Leading News Portal in Kannada

IND vs WI: ಸಿಕ್ಸರ್​ಗಳ ಶತಕವೀರ; ಸೂರ್ಯ ಸ್ಫೋಟಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..! – Kannada News | IND vs WI Suryakumar Yadav becomes fastest Indian batter to hit 100 sixes in T20Is

0

ಪೃಥ್ವಿಶಂಕರ |

Updated on: Aug 09, 2023 | 8:52 AM

Suryakumar Yadav: ಸೂರ್ಯಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಸಿಡಿಸುವ ಮೂಲಕ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.

Aug 09, 2023 | 8:52 AM

ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಸಿಡಿಸುವ ಮೂಲಕ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಸೂರ್ಯ, ಮೂರನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಇನ್ನಿಂಗ್ಸ್‌ನ ಮೂರನೇ ಸಿಕ್ಸರ್‌ ಸಿಡಿಸುವ ಮೊದಲು 23 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು.

ಈ ಸಿಕ್ಸರ್​ ಜೊತೆಗೆ ಸೂರ್ಯ ತಮ್ಮ ಸಿಕ್ಸರ್​ಗಳ ಶತಕವನ್ನು ಪೂರೈಸಿದ್ದಲ್ಲದೆ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ತಮ್ಮ 49 ಇನ್ನಿಂಗ್ಸ್‌ನಲ್ಲಿ ಸಿಕ್ಸರ್​ಗಳ ಶತಕ ಸಿಡಿಸಿದ ಸೂರ್ಯ, ವಿಶ್ವಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎನಿಸಿಕೊಂಡರು.

ತಮ್ಮ 49ನೇ ಟಿ20 ಪಂದ್ಯದಲ್ಲಿ ನೂರನೇ ಸಿಕ್ಸರ್ ಸಿಡಿಸಿದ ಸೂರ್ಯ, ಈ ವಿಚಾರದಲ್ಲಿ ಕ್ರಿಸ್ ಗೇಲ್​ರನ್ನು ಸರಿಗಟ್ಟಿದರೆ, ಕೇವಲ 42 ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ ಸಿಡಿಸಿರುವ ಎವಿನ್ ಲೆವಿಸ್‌ ನಂತರ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಚೆಂಡುಗಳ ಸಂಖ್ಯೆಗೆ ಸಂಬಂಧಿಸಿದಂತೆ, ಸೂರ್ಯ 1007 ಎಸೆತಗಳಲ್ಲಿ ಶತಕದ ಸಿಕ್ಸರ್ ಸಿಡಿಸಿದ ಕಾರಣ ಲೂಯಿಸ್ (789) ಮತ್ತು ಕಾಲಿನ್ ಮುನ್ರೊ (963) ನಂತರ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿದ್ದ ಗೇಲ್ (1071) ಇದ್ದಾರೆ

ಇನ್ನು ಭಾರತದ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯನ್ನು ನೋಡುವುದಾದರೆ.. ಈ ಪಟ್ಟಿಯಲ್ಲಿ 140 ಇನ್ನಿಂಗ್ಸ್​ಗಳಲ್ಲಿ 182 ಸಿಕ್ಸರ್​ಗಳನ್ನು ಸಿಡಿಸಿರುವ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

107 ಇನ್ನಿಂಗ್ಸ್​ಗಳಲ್ಲಿ 117 ಸಿಕ್ಸರ್‌ ಸಿಡಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ 49 ಇನ್ನಿಂಗ್ಸ್​ಗಳಿಂದ  101* ಸಿಕ್ಸರ್‌ ಸಿಡಿಸಿದ್ದಾರೆ.

68 ಇನ್ನಿಂಗ್ಸ್​ಗಳಲ್ಲಿ 99 ಸಿಕ್ಸರ್‌ ಸಿಡಿಸಿರುವ ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಮಾಜಿ ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್ 51 ಇನ್ನಿಂಗ್ಸ್​ಗಳಲ್ಲಿ 74 ಸಿಕ್ಸರ್‌ ಸಿಡಿಸಿ ಐದನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.