ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಕಪಿಲ್ ಮಿಶ್ರಾ ನೇಮಕ – Kannada News | Controversial BJP leader Kapil Mishra appointed a vice president of the party’s Delhi unit
ದೆಹಲಿಯಲ್ಲಿ ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಗಳನ್ನು ಟೀಕಿಸುವುದು ಮತ್ತು ನಗರದಲ್ಲಿ “ಮಿನಿ-ಪಾಕಿಸ್ತಾನ” ಎಂದು ಉಲ್ಲೇಖಿಸುವುದು ಅತ್ಯಂತ ಆಕ್ಷೇಪಾರ್ಹ ಮತ್ತು ಕೋಮು ಭಾವನೆಗಳಿಗೆ ಧಕ್ಕೆ ಎಂದು ಕಪಿಲ್ ಮಿಶ್ರಾ ಅವರ ಟ್ವೀಟ್ ಅನ್ನು ತೆಗೆದುಹಾಕಲು ಚುನಾವಣಾ ಆಯೋಗವು 2020 ರಲ್ಲಿ ಟ್ವಿಟರ್ಗೆ ಕೇಳಿಕೊಂಡಿತ್ತು.
ಕಪಿಲ್ ಮಿಶ್ರಾ
ದೆಹಲಿ ಆಗಸ್ಟ್ 05: ಕೋಮುವಾದಿ ಮತ್ತು ಪ್ರಚೋದನಾಕಾರಿ ಟ್ವೀಟ್ಗಳಿಗೆ ಹೆಸರುವಾಸಿಯಾಗಿರುವ ಬಿಜೆಪಿಯ (BJP) ವಿವಾದಿತ ನಾಯಕ ಕಪಿಲ್ ಮಿಶ್ರಾ (Kapil Mishra) ಅವರನ್ನು ದೆಹಲಿ (Delhi) ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಿಶ್ರಾ ಅವರನ್ನು ನೇಮಕ ಮಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ (Virendra Sachdeva) ಅವರು, ಈ ವಾರದ ಆರಂಭದಲ್ಲಿ ಘೋಷಿಸಲಾದ ಪಕ್ಷದ ಹೊಸ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರ ಹೆಸರು ಇದೆ. ಆದರೆ ಕೆಲವು ಕಾರಣಗಳಿಂದ ಅದನ್ನು ಘೋಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ದೆಹಲಿಯ ರಸ್ತೆಗಳನ್ನು ತೆರವುಗೊಳಿಸಲು ದೆಹಲಿ ಪೊಲೀಸರಿಗೆ ಆದೇಶ ನೀಡಿದ್ದಕ್ಕಾಗಿ 2020 ರಲ್ಲಿ ಮಿಶ್ರಾ ಟೀಕೆಗೆ ಗುರಿಯಾಗಿದ್ದರು. ಈಶಾನ್ಯ ದೆಹಲಿ ಗಲಭೆಯಲ್ಲಿ 50 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ನೂರಾರು ಜನರು ಗಾಯಗೊಂಡ ಸಂದರ್ಭದಲ್ಲಿ ಈ ಭಾಷಣವನ್ನು ಮಾಡಲಾಗಿತ್ತು. ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ವಿರುದ್ಧ ಪ್ರತಿಭಟನಾಕಾರರು ಮತ್ತು ಅದನ್ನು ಬೆಂಬಲಿಸುವ ಗುಂಪಿನ ನಡುವೆ ಘರ್ಷಣೆಗಳು ಭುಗಿಲೆದ್ದ ನಂತರ ವಕೀಲರ ಗುಂಪು ಮಿಶ್ರಾ ಅವರ “ಪ್ರಚೋದನಕಾರಿ ಟ್ವೀಟ್ಗಳಿಗಾಗಿ” ಪೊಲೀಸ್ ದೂರು ದಾಖಲಿಸಿದೆ.
ದೆಹಲಿ ಪೊಲೀಸರಿಗೆ ಮೂರು ದಿನಗಳ ಆಜ್ಞೆ, ಜಾಫ್ರಾಬಾದ್ ಮತ್ತು ಚಾಂದ್ ಬಾಗ್ನಲ್ಲಿನ ರಸ್ತೆಗಳನ್ನು ತೆರವುಗೊಳಿಸಿ. ಇದಾದ ನಂತರ, ನಮ್ಮಲ್ಲಿ ಹೇಳಲು ಬರಬೇಡಿ. ನಾವು ನಿಮ್ಮ ಮಾತನ್ನು ಕೇಳುವುದಿಲ್ಲ. ಮೂರೇ ಮೂರು ದಿನಗಳು” ಎಂದು ವಿಡಿಯೊ ಟ್ವೀಟ್ ಮಾಡಿದ ಮಿಶ್ರಾ ಆದೇಶ ಹೊರಡಿಸಿದ್ದರು.
ದೆಹಲಿಯಲ್ಲಿ ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಗಳನ್ನು ಟೀಕಿಸುವುದು ಮತ್ತು ನಗರದಲ್ಲಿ “ಮಿನಿ-ಪಾಕಿಸ್ತಾನ” ಎಂದು ಉಲ್ಲೇಖಿಸುವುದು ಅತ್ಯಂತ ಆಕ್ಷೇಪಾರ್ಹ ಮತ್ತು ಕೋಮು ಭಾವನೆಗಳಿಗೆ ಧಕ್ಕೆ ಎಂದು ಕಪಿಲ್ ಮಿಶ್ರಾ ಅವರ ಟ್ವೀಟ್ ಅನ್ನು ತೆಗೆದುಹಾಕಲು ಚುನಾವಣಾ ಆಯೋಗವು 2020 ರಲ್ಲಿ ಟ್ವಿಟರ್ಗೆ ಕೇಳಿಕೊಂಡಿತ್ತು.
12 ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಿಂದ ಮೊಘಲ್ ಸಾಮ್ರಾಜ್ಯದ ಕೆಲವು ಅಧ್ಯಾಯಗಳನ್ನು ಅಳಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ನಿರ್ಧಾರವನ್ನು ಮಿಶ್ರಾ ಏಪ್ರಿಲ್ನಲ್ಲಿ ಶ್ಲಾಘಿಸಿದ್ದರು. ‘ಕಳ್ಳರನ್ನು’ ಮೊಘಲ್ ದೊರೆಗಳು ಎಂದು ಕರೆಯಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಉಪಕ್ರಮವು ‘ಸತ್ಯ’ದ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.
ಎಎಪಿ ಸರ್ಕಾರದ ಮಾಜಿ ಸಚಿವ ಕಪಿಲ್ ಮಿಶ್ರಾ, ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾದ ನಂತರ ಆಗಸ್ಟ್ 2019 ರಲ್ಲಿ ದೆಹಲಿ ಬಿಜೆಪಿಗೆ ಸೇರಿದರು.
ಹಿಂದುತ್ವ ಸಿದ್ಧಾಂತದ ಕುರಿತು ಪ್ರಚೋದನಕಾರಿ ಭಾಷಣಗಳಿಗೆ ಹೆಸರುವಾಸಿಯಾಗಿರುವ ಮಿಶ್ರಾ ಅವರು ದೆಹಲಿ ಬಿಜೆಪಿ ಸೇರಿದಾಗಿನಿಂದ ಅವರಿಗೆ ಯಾವುದೇ ಸಾಂಸ್ಥಿಕ ಜವಾಬ್ದಾರಿಯನ್ನು ನೀಡಲಾಗಿಲ್ಲ. ಇವರು 2020 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಡೆಲ್ ಟೌನ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದು, ಎಎಪಿಯ ಅಖಿಲೇಶ್ ಪತಿ ತ್ರಿಪಾಠಿ ವಿರುದ್ಧ ಸೋತಿದ್ದರು.