EBM News Kannada
Leading News Portal in Kannada

ಬೆಂಗಳೂರು ಮೈಸೂರು ಚೆನ್ನೈ ಮಧ್ಯೆ ಸಂಚರಿಸಲಿದೆ ಬುಲೆಟ್ ರೈಲು; ಭೂ ಸಮೀಕ್ಷೆ ಆರಂಭ – Kannada News | Bullet train will travel between Bangalore Mysore Chennai soon; Start of land survey

0


Chennai-Bengaluru-Mysuru bullet train; ಕೆಲವು ವರ್ಷಗಳ ಹಿಂದೆ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ವಿವಿಧ ಹೈಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ಅಧ್ಯಯನವನ್ನು ಪ್ರಾರಂಭಿಸಿದ ನಂತರ ಮೈಸೂರು – ಬೆಂಗಳೂರು – ಚೆನ್ನೈ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಮೊದಲ ಅನುಮೋದನೆಯನ್ನು ಪಡೆದಿತ್ತು.

ಬೆಂಗಳೂರು ಮೈಸೂರು ಚೆನ್ನೈ ಮಧ್ಯೆ ಸಂಚರಿಸಲಿದೆ ಬುಲೆಟ್ ರೈಲು; ಭೂ ಸಮೀಕ್ಷೆ ಆರಂಭ

ಬುಲೆಟ್ ರೈಲು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಹೈದರಾಬಾದ್ ಮೂಲದ ಕಂಪನಿಯೊಂದು ಬೆಂಗಳೂರು ಚೆನ್ನೈ ಬುಲೆಟ್ ರೈಲು ಯೋಜನೆಗಾಗಿ (Chennai-Bengaluru-Mysuru bullet train project) ಇತ್ತೀಚೆಗೆ ಭೂ ಸಮೀಕ್ಷೆ (Land Survey) ಆರಂಭಿಸಿದೆ. ಕಂಪನಿಯು ಕೋಲಾರ ಮತ್ತು ಚೆನ್ನೈ ನಡುವಿನ ಭೂ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಇದೇ ಕಂಪನಿಯಿಂದ ದಕ್ಷಿಣದ ಎರಡು ರಾಜ್ಯಗಳ ರಾಜಧಾನಿಗಳ ನಡುವೆ ವೈಮಾನಿಕ ಸಮೀಕ್ಷೆ ಶೀಘ್ರದಲ್ಲೇ ಆರಂಭವಾಗಲಿದೆ. ಸಮೀಕ್ಷೆಗಳು ಪೂರ್ಣಗೊಂಡ ನಂತರ ಬುಲೆಟಿನ್ ರೈಲು ಯೋಜನೆಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಕಂಪನಿಯು ಸಿದ್ಧಪಡಿಸಲಿದೆ.

ಕೆಲವು ವರ್ಷಗಳ ಹಿಂದೆ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ವಿವಿಧ ಹೈಸ್ಪೀಡ್ ರೈಲು ಕಾರಿಡಾರ್‌ಗಳಿಗಾಗಿ ಅಧ್ಯಯನವನ್ನು ಪ್ರಾರಂಭಿಸಿದ ನಂತರ ಮೈಸೂರು – ಬೆಂಗಳೂರು – ಚೆನ್ನೈ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಮೊದಲ ಅನುಮೋದನೆಯನ್ನು ಪಡೆದಿತ್ತು.

ಪ್ರಸ್ತುತ, ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವಿನ ಅತ್ಯಂತ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. ಇದು 435 ಕಿಮೀ ದೂರವನ್ನು ಕ್ರಮಿಸಲು ಸುಮಾರು 4:30 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬುಲೆಟ್ ರೈಲು 435 ಕಿ.ಮೀ ದೂರವನ್ನು ಕ್ರಮಿಸಲು 1:10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಡಿಪಿಆರ್ ವರದಿಯು ಎರಡೂ ನಗರಗಳ ನಡುವಿನ ಏಕೀಕೃತ ರೈಡರ್‌ಶಿಪ್‌ನ ಡೇಟಾವನ್ನು ಒಳಗೊಂಡಿರುತ್ತದೆ. ಇದು ಬೆಂಗಳೂರು – ಚೆನ್ನೈ ಹೆದ್ದಾರಿಗಳ ನಡುವಿನ ಟೋಲ್ ಪ್ಲಾಜಾಗಳ ಟ್ರಾಫಿಕ್ ಡೇಟಾ ಮತ್ತು ಅದೇ ಅವಧಿಯಲ್ಲಿ ರೈಲು ಮತ್ತು ವಿಮಾನ ಪ್ರಯಾಣದ ಸವಾರರ ಡೇಟಾವನ್ನು ಒಳಗೊಂಡಿರುತ್ತದೆ.

ಬೆಂಗಳೂರು – ಮೈಸೂರು – ಚೆನ್ನೈ ಮಾರ್ಗವು ಹೆಚ್ಚಿನ ದಟ್ಟಣೆ ಹೊಂದಿರುವ ಪ್ರದೇಶವಾಗಿದೆ. ಬುಲೆಟ್ ಟ್ರೈನ್ ಯೋಜನೆಯು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Published On – 9:06 pm, Mon, 7 August 23

ತಾಜಾ ಸುದ್ದಿ

Leave A Reply

Your email address will not be published.